ರಾಣೆಬೆನ್ನೂರ

ಬಲಿದಾನ ದಿವಸ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬಲಿದಾನ ದಿವಸ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ರಾಣೆಬೆನ್ನೂರು ಧರ್ಮ ಭಾರತಿ ಭವನದಲ್ಲಿ ಜೆಸಿಐ ಸಂಶ್ಥೆ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವು ಡಿವೈ ಎಸ್ ಪಿ

ಜೀವ ರಕ್ಷಣೆಗೆ ರಕ್ತದ ಅವಶ್ಯ:  ಸುರೇಶ

ರಾಣೇಬೆನ್ನೂರು ಮಾ 27: ಅಮೂಲ್ಯವಾದ ಜೀವ ರಕ್ಷಣೆಗೆ ರಕ್ತದ ಅವಶ್ಯಕತೆ ಈ ಹಿಂದಿಗಿಂತಲೂ ಇಂದು ಬಹಳಷ್ಟು ಅಗತ್ಯವಿದೆ. ರಕ್ತ ಉತ್ಪಾದನೆ ಮಾಡುವ ವಸ್ತು ಅಲ್ಲ, ಏನಿದ್ದರು ದಾನಿಗಳಿಂದಲೇ ಪಡೆಯ ಬೇಕಾಗುತ್ತದೆ, ದಾನಿಗಳು ಯಾವುದೇ ಮಡಿವಂತಿಕೆ ತೋರದೆ ಮತ್ತೊಬ್ಬರ ಜೀವ ಉಳಿ ಸುವ ರಕ್ತವನ್ನು ದಾನ ನೀಡುವುದರ ಮೂಲಕ ತಮ್ಮ ಮಾನವೀಯತೆ ಮೆರೆಯಬೇಕು ಎಂದು ಡಿವೈಎಸ್ಪಿ ಟಿ.ವಿ.ಸುರೇಶ ಹೇಳಿದರು. 

ಅವರು ನಗರದ ಧರ್ಮಭಾರತಿ ಸಭಾಂಗಣದಲ್ಲಿ ಜಿಲ್ಲಾ ನ್ಯಾಷನಲ್ ಇಂಟಿ ಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷನ್ ಜೆಸಿಐ ಸೇವಾಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕವು ಭಗತ್‍ಸಿಂಗ್ ಸುಖದೇವ್ ಮತ್ತು ರಾಜಗುರು ಅವರ 90ನೇ ಹುತಾತ್ಮ ದಿನಾ ಚರಣೆ ನಿಮಿತ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಯುವಕರು ಭವ್ಯ ಭವಿಷ್ಯದ ರೂವಾರಿಗಳು ಈ ದೇಶದ ಸಾಮಾಜಿಕ ಸಮಾನತೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವಲ್ಲಿ ತಮ್ಮ ಪ್ರಜ್ಞಾವಂತಿಕೆ ಮೆರೆಯಬೇಕು. ಸಮಾಜ ಮತ್ತು ಸರ್ಕಾರ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಏನು ಕೊಟ್ಟಿದ್ದೇವೆ ಕೊಡಬೇಕಾದ್ದೇನು ಎನ್ನು ವುದನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲು ಸಾದ್ಯವಿಲ್ಲ ಎಂದ ಅವರು ಸ್ವಯಂ ಪ್ರೇರಣೆ ಯಿಂದ ರಕ್ತದಾನ ನೀಡಲು ಬಂದಿರುವುದು ತಮಗೆ ಅತ್ಯಂತ ಸಂತೋಷವಾಗಿದೆ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಡಾ:ಶಿವಾನಂದ ಹಿತ್ತಲಮನಿ ಅವರು ಪ್ರಸ್ತುತ ನಡೆಯುತ್ತಿರುವ ರಕ್ತದಾನ ಶಿಬಿರವು ರಾಣೇಬೆನ್ನೂರು ನಗರ ಸೇರಿದಂತೆ ಭಾರತದಾ ದ್ಯಂತ ವಿವಿದೆಡೆ ಏಕ ಕಾಲದಲ್ಲಿ ಆಯೋಜನೆಗೊಂಡಿದ್ದು ಇದುವ ರೆಗೂ ಒಟ್ಟು 97,744 ಯುನಿಟ್ ರಕ್ತವನ್ನು ಸಂಗ್ರಹಿ ಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ದಾಖಲಾಗಿದೆ ಎಂದರು.ಮುಖ್ಯ ಅತಿಥಿ ಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಲ್.ವಿ.ಸಂಗಳದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಘಟಕದ ಅಧ್ಯಕ್ಷ ರವಿಕುಮಾರ ಪಾಟೀಲ್, ಆರ್.ವಿ. ಪಾಟೀಲ್, ಪ್ರಕಾಶ ಗಚ್ಚಿನಮಠ, ನಿಮಾ ಅಧ್ಯಕ್ಷ ಡಾ ಶ್ರೀಕಾಂತ್ ಕಳಸದ, ಇಸ್ಮಾಯಿಲ್  ಐರಣಿ, ಡಾ.ನಾರಾ ಯಣ ಪವಾರ್, ಡಾ.ಅರುಣ್‍ಕುಮಾರ ಚಂದನ್, ಹರೀಶ್ ಕೊಪರ್ಡೆ, ನಾರಾಯಣ ಬಿಸ್ಲಳ್ಳಿ, ಪ್ರಕಾಶ್ ಬನ್ನಿಕೋಡ್, ಡಾ.ಹರಿಹರ್,  ಡಾ.ಬಾಬು ಮೆನನ್,  ಡಾ.ಶಿವಯೋಗಿ,  ಡಾ.ಜೆಡಿ ಯಪ್ಪನವರ, ಡಾಮಾಲತೇಶ ತಳ ವಾರ್, ಡಾ.ಕಮತರ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಸುದ್ದಿ ಓದಿ