ಇಂಡಿ

ಮಂಗಳವಾರ ಶಿಕ್ಷಕ ರೇವಣಸಿದ್ಧೇಶ್ವರವರ ಮಠ ಉದ್ಘಾಟನೆ

ಮಂಗಳವಾರ ಶಿಕ್ಷಕ ರೇವಣಸಿದ್ಧೇಶ್ವರವರ ಮಠ ಉದ್ಘಾಟನೆ
ಇಂಡಿ: ತಾಲೂಕಿನ ಅಥರ್ಗಾ ಗ್ರಾಮದಲ್ಲಿ ನೂತನವಾಗಿ ಕಟ್ಟಿದ ರೇವಣಸಿದ್ಧೇಶ್ವರ ದೇವಾಲಯ.

ಇಂಡಿ: ತಾಲೂಕಿನ ಅಥರ್ಗಾ ಗ್ರಾಮದಲ್ಲಿ ನೂತನವಾಗಿ ಕಟ್ಟಿದ ಶಿಕ್ಷಕ ರೇವಣಸಿದ್ಧೇಶ್ವರವರ ಮಠ ಮತ್ತು ಮೀನಾಕ್ಷಿ. ಆರ್‌.ಕಲ್ಲೂರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ಜೂ. 14ಮಂಗಳವಾರ ನಡೆಯಲಿದೆ.  

ಮಂಗಳವಾರ ಬೆಳಗ್ಗೆ 11.30 ಗಂಟೆಗೆ ಅಥರ್ಗಾ ಗ್ರಾಮದ ಆರ್‌.ಎಮ್‌. ಬಿರಾದಾರ ಪ್ರೌಢಶಾಲೆಯ ಮೈದಾನದಲ್ಲಿ ನಡೆಯುವ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮಿಜಿ  ವಹಿಸಲಿದ್ದಾರೆ. 

ಕಾರ್ಯಕ್ರಮದ ನೇತೃತ್ವವನ್ನು ಅಥರ್ಗಾದ ರೇವಣಸಿದ್ಧೇಶ್ವರ ಮಠದ ಮುರುಘೇಂದ್ರ ಶಿವಾಚಾರ್ಯರು, ಶಿರಶ್ಯಾಡದ ಆಭಿನವ ಮುರಗೇಂದ್ರ ಶ್ರೀಗಳು, ಅಥರ್ಗಾದ ಷಣ್ಮುಖಾರೂಢ ಆಶ್ರಮದ ಈಶಪ್ರಸಾದ  ಶ್ರೀಗಳು ವಹಿಸಲಿದ್ದಾರೆ. 

ಸಂಸದ ರಮೇಶ ಜಿಗಜಿಣಗಿ, ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ಶಾಸಕ ಯಶವಂತರಾಯಗೌಡ ಪಾಟೀಲ, ಡಾ. ಎಮ್‌.ಎಸ್,ಕಲ್ಲೂರ, ನಿವೃತ್ತ ಎಸಿಪಿ ಅಥರ್ಗಾದ ಬಿ.ಡಿ.ಪಾಟೀಲ, ನ್ಯಾಯವಾದಿ ಬಿ.ವಿ.ಲಾಹೊಟಿ, ಗುತ್ತಿಗೆದಾರ ಡಾ. ಜಿ.ಶಂಕರ, ಡಾ. ಆರ್‌.ಎಮ್‌. ಅವರಸಂಗ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ  ಪಾಟಿಲ, ಗ್ರಾ.ಪಂ ಅಧ್ಯಕ್ಷೆ ಸುವರ್ಣಾ ಶಿವೂರ ಪಾಲ್ಗೊಳ್ಳಲಿದ್ದಾರೆ.  

ಹೆಣ್ಣು ಮಕ್ಕಳ ಶಾಲೆಯಲ್ಲಿ ಕಟ್ಟಿದ ಗುಡಿಯನ್ನು ಪೂಜ್ಯ ಸಿದ್ಧೇಶ್ವರ ಶ್ರೀಗಳು ಉದ್ಘಾಟಿಸುವರು, ರಾಷ್ಟ್ರೀಯ ಪಠ್ಯ ಪುಸ್ತಕದಲ್ಲಿ ಶ್ರೀಗಳ ಚರಿತ್ರೆಗೆ ಮುದ್ರಣ ಸೇವೆ ಮಾಡಿದ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ತಾ.ಪಂ ಮಾಜಿ ಸದಸ್ಯ ಗಣಪತಿ ಬಾಣಿಕೋಲ ಇವರಿಂದ ನೋಟ್ ಬುಕ್ ವಿತರಣೆ, ಹಣಮಂತ ನಾಗಣಸೂರ ಇವರ ಪುತ್ರ ಗ್ರಾ.ಪಂ ಸದಸ್ಯ  ಶ್ರೀಶೈಲ ನಾಗಣಸೂರ ಇವರಿಂದ ರೇವಣ ಸಿದ್ಧೇಶ್ವರ ಶ್ರೀಗಳ ವೃತ್ತ್‌ ನಿರ್ಮಾಣದ ಅನಾವರಣ ಕಾರ್ಯಕ್ರಮ ನಡೆಯಲಿವೆ ಎಂದು ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ