ಶಿಗ್ಗಾವಿಯಲ್ಲಿ ಭರ್ಜರಿ ಸಂತೆ
ಶಿಗ್ಗಾವಿ ನವೆಂಬರ್ 05: ಕೋವಿಡ್-19 ಹಾವಳಿಯಿಂದ ಹಲವಾರು ತಿಂಗಳಿಂದ ಕಣ್ಮರೆಯಾಗಿದ್ದ ಸಂತೆಯ ಖರೀದಿ ಮತ್ತು ಮಾರಾಟ ದೃಶ್ಯಗಳು ಪಟ್ಟಣದ ಸಂತೆ ಮೈದಾನದಲ್ಲಿ ಬುಧವಾರ ಕಂಡು ಬಂದವು.
ಕೊರೊನಾ ಹಾವಳಿಯಿಂದ ರೋಗ ಉಲ್ಬಣವಾಗಬಾರದು ಮತ್ತು ಹೆಚ್ಚು ಜನರು ಸೇರಬಾರದು ಎಂದು ಸಂತೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಸರ್ಕಾರ ಸ್ಥಗಿತಗೊಳಿಸಿತ್ತು ಮತ್ತು ಶಿಗ್ಗಾವಿ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಸಂತೆ ನಡೆದಿಲ್ಲ. ಆದರೆ ಬುಧವಾರ ಭರ್ಜರಿ ಸಂತೆ ನಡೆಯಿತು. ಇತ್ತ ಜಿಲ್ಲಾಧಿಕಾಗಳು ನ.1ರಿಂದ ನ.31ನೇ ತಾರೀಖಿನವರೆಗೂ ನಿಷೇಧಾಜ್ಞೆ ಮುಂದುವರೆಸಿದರೂ ಇಲ್ಲಿ ಮಾತ್ರ ಸಂತೆ ಬೆಳಗ್ಗೆಯಿಂದ ಸಂಜೆಯ ವರೆಗೆ ಜೋರಾಗಿ ನಡೆಯಿತು.
ಫೋಟೋ : ಶಿಗ್ಗಾವಿಯಲ್ಲಿ ಬುಧವಾರ ಭರ್ಜರಿ ಸಂತೆ ನಡೆದ ದೃಶ್ಯಗಳು