ಯರಗಟ್ಟಿ

ಜನಸಂಖ್ಯೆ ಹೆಚ್ಚಳದಿಂದ ಹಲವಾರು ಸಮಸ್ಯೆ: ಡಾ.ಮೇಘರಾಜ

ಜನಸಂಖ್ಯೆ ಹೆಚ್ಚಳದಿಂದ ಹಲವಾರು ಸಮಸ್ಯೆ: ಡಾ.ಮೇಘರಾಜ

ಲೋಕದರ್ಶನ ವರದಿ 

ಯರಗಟ್ಟಿ 02: ಜನಸಂಖ್ಯೆ ಹೆಚ್ಚಳದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ವೈದ್ಯಾಧಿಕಾರಿ ಡಾ.ಮೇಘರಾಜ ಶೀಲವಂತ ಹೇಳಿದರು. 

ಯರಗಟ್ಟಿ ಸಮೀಪದ ಮದ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸಂಖ್ಯೆ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳದಿಂದ ನಾನಾ ರೀತಿಯ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಣ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಆಯುಷ ವೈದ್ಯಾಧಿಕಾರಿ ಡಾ. ಮಲ್ಲಮ್ಮ ನೇಸರಗಿ ಮಾತನಾಡಿ, ಬಾಲ್ಯ ವಿವಾಹ, ಅನಕ್ಷರತೆ, ಮೂಢನಂಬಿಕೆ, ಗಂಡು ಮಗುವಿನ ವ್ಯಾಮೋಕ್ಕೆ ಬಲಿಯಾಗಿ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರಾಗದೆ ಹೆಣ್ಣಾಗಲಿ ಗಂಡಾಗಲಿ ಆ ಮಗುವನ್ನು ಪ್ರೀತಿಯಿಂದ ಪೋಷಿಸಿ ಎಂದರು.   

ಡಾ.ಕಾರ್ತಿಕ ವಾಲಿ, ಆಸಮಾ ಮುಲ್ಲಾ, ಹನಮಂತರಾವ ಪಚ್ಚಿನವರ, ಶಶಿಧರ ಉಪ್ಪಿನ, ಬಸವರಾಜ ಕುರಿ, ಹನಮವ್ವ ಉಪ್ಪಾರ, ಲಕ್ಷ್ಮೀ ಬಡಿಗೇರ, ಸಾವಿತ್ರಿ ವಾಲಿಕಾರ, ಸುನಂದಾ ಭಂಡಾರಿ, ಬಾಳಪ್ಪ ಬೈಲವಾಡ ಸೇರಿದಂತೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಇದ್ದರು. 


ಸುದ್ದಿ ಓದಿ