ಯರಗಟ್ಟಿ

ಮಣ್ಣೆತ್ತಿನ ಅಮಾವಾಸ್ಯೆ: ಬಸವೇಶ್ವರನಿಗೆ ವಿಶೇಷ ಪೂಜೆ

ಮಣ್ಣೆತ್ತಿನ ಅಮಾವಾಸ್ಯೆ: ಬಸವೇಶ್ವರನಿಗೆ ವಿಶೇಷ ಪೂಜೆ

ಯರಗಟ್ಟಿ 19: ಸಮೀಪದ ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ರವಿವಾರ ಮಳೆ ಸಮೃದ್ಧಿಗಾಗಿ ಗ್ರಾಮಸ್ಥರಿಂದ ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. 

ಮಳೆ ಬಂದು ಹೊಲದಲ್ಲಿ ಬೀಜ ಬಿತ್ತನೆ ಮಾಡುವ ಸಮಯದಲ್ಲಿ ರೈತರು ಮಳೆಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಸಕಾಲಕ್ಕೆ ಮಳೆ ಬೀಳದಿರುವದರಿಂದ ರೈತ ಕಂಗಾಲಾಗಿ ಕಪ್ಪೆಗಳ ಹಾಗೂ ಕತ್ತೆಗಳ ಮದುವೆ ಮೊರೆ ಹೊಗಿದ್ದರೆ ಎಂದು ರೈತರು ಮತ್ತು ಮಹಿಳೆಯರು ಎನ್ನುತ್ತಾರೆ. ಬಳಿಕ ಅನ್ನಸಂತರೆ​‍್ಣ ನಡೆಯಿತು. ವೇದಮೂರ್ತಿ ಮಹಾದೇವಯ್ಯ ಪುಜೇರ, ಮುಖಂಡ ಬಾಲನಾಯ್ಕ ಕಡಬಿ, ಚೆನ್ನಯ್ಯ ಪೂಜೇರ, ಈರಯ್ಯ ಗೌಡರ, ಪತ್ರೆಪ್ಪ ಪಟ್ಟನಶೆಟ್ಟಿ, ಗುರುಬಸಯ್ಯ ಪುಜೇರ, ಈರಣ್ಣ ಅಂಗಡಿ, ಮಡಿವಾಳಯ್ಯ ಪುಜೇರ, ಗಣೇಶ ಚಿಲಮೂರ, ಸದೇಪ್ಪ ಬಂಡ್ರೋಳಿ, ಸಿದ್ದಯ್ಯ ಪುಜೇರ ಇತರರು ಇದ್ದರು. 


ಸುದ್ದಿ ಓದಿ