ಶಿಗ್ಗಾವ್

ಚಂಪಾ ನಿಧನಕ್ಕೆ ಮಂಜುನಾಥ ಕುನ್ನೂರ ಸಂತಾಪ

ಚಂಪಾ ನಿಧನಕ್ಕೆ ಮಂಜುನಾಥ ಕುನ್ನೂರ ಸಂತಾಪ


ಲೋಕದರ್ಶನ ವರದಿ 

ಶಿಗ್ಗಾವಿ 12: ಹಿರಿಯ ಸಾಹಿತಿ, ವಿಮರ್ಶಕ, ನಾಟಕಕಾರ, ವಿಶೇಷವಾಗಿ ಬಂಡಾಯ ಸಾಹಿತಿಯಾಗಿ ನಾಡಿನ ಜನತೆಯನ್ನು ಜಾಗೃತಗೊಳಿಸಿದ ಚಂದ್ರಶೇಖರ ಪಾಟೀಲ ಇವರ ನಿಧನದಿಂದ ಕನ್ನಡ ನಾಡಿಗೆ ವಿಶೇಷವಾಗಿ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಸಿ. ಕುನ್ನೂರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  

ಚಂಪಾ ನಮ್ಮ ಕ್ಷೇತ್ರದ ಹತ್ತಿಮತ್ತೂರಿನವರು. ಈ ನೆಲದ ಗುಣವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದ ಅವರು ಕನ್ನಡ ಹೋರಾಟಗಾರರಾಗಿ, ಬಂಡಾಯ ಸಾಹಿತಿಯಾಗಿ ಖ್ಯಾತಿ ಪಡೆದವರು. ಸಂಕ್ರಮಣವೆಂಬ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ   ದೀರ್ಘಕಾಲದವರೆಗೆ ನಡೆಸಿಕೊಂಡು ಬಂದ ಇವರು ಬಸವಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅನೇಕ ರಚನಾತ್ಮಕ ಕೆಲಸ ಮಾಡಿದವರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬ ವರ್ಗಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ