ಕಾರವಾರ

ಹಣ್ಣಿನ ಫ್ಯಾಕ್ಟರಿಗೆ ಮಂಜುಳ ನಾಯ್ಕ್‌ ಭೇಟಿ, ಪರೀಶೀಲನೆ

ಹಣ್ಣಿನ ಫ್ಯಾಕ್ಟರಿಗೆ ಮಂಜುಳ ನಾಯ್ಕ್‌  ಭೇಟಿ, ಪರೀಶೀಲನೆ

ಬನವಾಸಿ 20: ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಸುರಕ್ಷತೆಯ ಹಿನ್ನಲೆಯಲ್ಲಿ ಬನವಾಸಿಯ ಕಂದಾಯ ನೀರೀಕ್ಷಕಿ ಮಂಜುಳ ನಾಯ್ಕ್‌ ಅವರು ಸ್ಥಳೀಯ ಫ್ರೆಸ್ ಪ್ರೂಟ್ ಹಣ್ಣಿನ ಫ್ಯಾಕ್ಟರಿಗೆ ಭೇಟಿ ನೀಡಿ ಪರೀಶೀಲನೆಗೈದು ಕೊವೀಡ್ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಆದೇಶ ನೀಡಿದರು. ಪಟ್ಟಣದಲ್ಲಿ ಅತಿ ಹೆಚ್ಚು ಕೊವೀಡ್ ಪ್ರಕರಣಗಳು ಕಂಡು ಬರುತ್ತಿದ್ದು ಫ್ಯಾಕ್ಟರಿಗೆ ಬರುವ ಕಾರ್ಮಿಕರಿಗೆ ಸ್ಯಾನಿಟೈಜ್, ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಅಲ್ಲದೇ ಕಾರ್ಮಿಕರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸಕ್ಕೆ ರಜೆ ಮಾಡಿದರೆ ಅವರ ಸಂಬಳ ಕಡಿತ ಮಾಡಬಾರದು. ಕೊವಿಡ್ ನಿಯಮ ಸರಿಯಾಗಿ ಪಾಲನೆ ಮಾಡದೇ ಬೇಜವಾಬ್ದಾರಿ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.   ನಂತರ ಸಮೀಪದ ದಾಸನಕೊಪ್ಪದಲ್ಲಿ ಹಾಕಿರುವ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರೀಶೀಲಿಸಿದರು. ಹೊರ ಜಿಲ್ಲೆಗಳಿಂದ ಬರುವವರ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸುದ್ದಿ ಓದಿ