ಮನಿಷ್ ಸಿಸೋಡಿ ಬಂಧನ ಖಂಡನೀಯ: ಉಳ್ಳಾಗಡ್ಡಿ
ಮುಂಡರಗಿ : ದೆಹಲಿಯಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುವುದರ ಮೂಲಕ ದೇಶದ ಬದಲಾವಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಹಾಗೂ ಸಚಿವ ಮನಿಷ್ ಸಿಸೋಡಿಯವರ ಬೆಳವಣಿಗೆಯನ್ನು ಸಹಿಸದೇ ಇರುವ ಬಿಜೆಪಿ ಪಕ್ಷವು, ಎಲ್ಲಿ ತಮ್ಮ ಪಕ್ಷಕ್ಕೆ ಧಕ್ಕೆ ಬರುತ್ತದೆ ಎಂಬ ಭಯದಿಂದ ಅವರ ಮೇಲೆ ಸುಳ್ಳು ಆರೋಪವನ್ನು ಮಾಡಿ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಎಎಪಿ ಪಕ್ಷದ ಗದಗ ಜಿಲ್ಲಾ ಕಾರ್ಯದರ್ಶಿ ಅಶೋಕ ಉಳ್ಳಾಗಡ್ಡಿ ತೀವ್ರವಾಗಿ ಖಂಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದೇಶ್ಯಾದ್ಯಂತ ಆಮ್ ಆದ್ಮೀ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಮನೀಷ್ ಸಿಸೋಡಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸಕರ್ಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ. ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ನೀಡಲೂ ನಾವುಗಳು ಸಿದ್ದರಿದ್ದೇವೆ. ಬಿಜೆಪಿ ಹೆದರಿಸುತ್ತಿದ್ದೆ ಆದರೆ ನಮ್ಮ ಕೇಜ್ರಿವಾಲ್ ರಂತಹ ದಿಟ್ಟ ನಾಯಕ ಇರುವವರೆಗೂ ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ.
ಅಲ್ಲದೇ ಮಾ.4ರಂದು ಡಾವಣಗೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯವರ ನೇತೃತ್ವದಲ್ಲಿ ದೊಡ್ಡ ಸಮಾವೇಶ ನಡೆಯುತ್ತದೆ. ಅದರಲ್ಲಿ ಎಎಪಿ ತಮ್ಮ ಪಕ್ಷದ ಬಲವರ್ಧನೆಯನ್ನು ಎತ್ತಿ ಹಿಡಿದು ಬಿಜೆಪಿ ಪಕ್ಷದ ದುರಾಡಳಿತವನ್ನು ಜನತೆಯ ಮುಂದೆ ಇಡುತ್ತಾರೆ ಎಂಬ ಭಯದಿಂದ ಮುಂಚನೆ ಅವರನ್ನು ಬಂಧಿಸಿದ್ದಾರೆ ಎಂದು ಆಗ್ರಹಿಸಿದರು.
ಈ ವೇಳೆ ಎಎಪಿ ಮುಖಂಡ ಬಸವರಾಜ ರಾಮೇನಹಳ್ಳಿ ಮಾತನಾಡಿ. ಮನಿಷ್ ರವರು ದೆಹಲಿ ರಾಜ್ಯದ ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಾಗೂ ಅವರನ್ನು ಇನ್ನು ಉನ್ನತ ಶಿಕ್ಷಣಕ್ಕೆಂದು ವಿವಿಧ ಯೋಜನೆಗಳನ್ನು ಜಾರಿ ತಂದು ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ವಿರೋಧ ಪಕ್ಷದವರು ಸಹಿಸುತ್ತಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ತುಂಬಾ ಪ್ರಜ್ಞಾವಂತ ನಾಯಕರು. ಅವರ ಮುಂದಾಳತ್ವದಲ್ಲಿ ಯಾರಿಗೂ ಅನ್ಯಾಯವಾಗದಂತೆ ನಡೆದುಕೊಳ್ಳುತ್ತಾರೆ. ಇಂತಹ ನಾಯಕರಿರುವವರೆಗೂ ಯಾರು ಹೆದರುವ ಅವಶ್ಯಕತೆ ಇಲ್ಲ.
ಬಿಜೆಪಿ ಹಲವಾರು ಭ್ರಷ್ಟಾಚಾರವನ್ನು ಎಸಗಿದ್ದಲ್ಲದೇ ಶೇ.40 ಸರ್ಕಾರ ಅಂತ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಬಿಜೆಪಿ ಪಕ್ಷಕ್ಕೆ ತೀವ್ರ ತೊಂದರೆಯನ್ನು ಅನುಭವಿಸುತ್ತದೆ ಎಂಬ ಸಂಕೋಚದಿಂದ ಇನ್ನೊಬ್ಬರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದೆ. ತಮ್ಮ ಡಬಲ್ ಇಂಜಿನ್ ಸಕರ್ಾರವಿದೆ ಎಂದು ದೇಶದ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿದರು. ಈ ವೇಳೆ ಮುಖಂಡರಾದ ಸುಭಾಸ್ ಕುಂಬಾರ, ಕನಕಪ್ಪ ದಾಸಕನಕಪ್ಪನವರ, ಈರಣ್ಣ ಆರೇರ, ಕಿರಣ ಹಿರೇಮಠ, ಈರಣ್ಣ ಶೀರಿ, ದುರಗಪ್ಪ ಚಿಕ್ಕಣ್ಣವರ ಇದ್ದರು