ಇತರ ನಗರಗಳು

ಮಾದಕ ವಸ್ತು ಮಾಫಿಯಾ ನಿಮರ್ೂಲನೆಗಾಗಿ ಸೇನೆ ಮತ್ತು ಅಸ್ಸಾಂ ರೈಫಲ್ ಯೋಧರ ನೆರವು ಪಡೆದ ಮಣಿಪುರ ಸಕರ್ಾರ

ಮಾದಕ ವಸ್ತು ಮಾಫಿಯಾ ನಿಮರ್ೂಲನೆಗಾಗಿ ಸೇನೆ ಮತ್ತು ಅಸ್ಸಾಂ ರೈಫಲ್ ಯೋಧರ ನೆರವು ಪಡೆದ ಮಣಿಪುರ ಸಕರ್ಾರ

ಇಂಫಾಲ 03: ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಹು ಆಳವಾಗಿ ಬೇರುಬಿಟ್ಟಿರುವ ಮಾದಕ ವಸ್ತು ಮಾಫಿಯಾ ನಿಮರ್ೂಲನೆಗಾಗಿ ಸಕರ್ಾರ ದೃಢ ಸಂಕಲ್ಪ ಮಾಡಿದೆ. 

ಗಡಿ ಪ್ರದೇಶದಲ್ಲಿ ಅಫೀಮು ಗಿಡಗಳ ಅಕ್ರಮ ಬೇಸಾಯ ಮೂಲೋತ್ಪಾದನೆ ಮಾಡಲು ಸೇನೆ ಮತ್ತು ಅಸ್ಸಾಂ ರೈಫಲ್ ಯೋಧರ ನೆರವು ಪಡೆಯಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬೀರೆನ್ ಸಿಂಗ್ ತಿಳಿಸಿದ್ದಾರೆ. 

ಈ ವರ್ಷ ಒಟ್ಟು 600ಕ್ಕೂ ಹೆಚ್ಚು ಡ್ರಗ್ಸ್ ಸ್ಮಗ್ಲರ್ಗಳು ಮತ್ತು ಮಾದಕ ವಸ್ತು ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಮಣಿಪುರದಿಂದ ಡ್ರಗ್ಸ್ ಹಾವಳಿ ನಿಮರ್ೂಲನೆಗೆ ತಮ್ಮ ಸಕರ್ಾರ ಕೃತ ನಿಶ್ಚಯ ಮಾಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

ಭಾರತ-ಮ್ಯಾನ್ಮಾರ್ ಗಡಿಯ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಅಕ್ರಮ ಅಫೀಮು ಮತ್ತು ಗಸಗಸೆ ಗಿಡಗಳನ್ನು ಬೆಳೆಯಲಾಗುತ್ತಿದ್ದು, ಭದ್ರತಾ ಸಿಬ್ಬಂದಿ ಸಹಾಯದೊಂದಿಗೆ ಈ ಬೃಹತ್ ಪ್ರಮಾಣದ ಬೆಳೆಯನ್ನು ಸರ್ವನಾಶಗೊಳಿಸುವುದಾಗಿ ಬೀರೆನ್ ಸಿಂಗ್ ವಿವರಿಸಿದರು.

ಏಷ್ಯಾ ಖಂಡದಲ್ಲಿ ಈಶಾನ್ಯ ಭಾರತದ ಅಷ್ಟ ಸಹೋದರಿ ರಾಜ್ಯಗಳು(ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಸಿಕ್ಕಿಂ ಮತ್ತು ತ್ರಿಪುರ) ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ದಂಧೆಯಲ್ಲಿ ಸುವರ್ಣ ತ್ರಿಕೋನ ಎಂದೇ ಕುಖ್ಯಾತಿ ಪಡೆದಿವೆ.

ಸುದ್ದಿ ಓದಿ