ಹೂವಿನ ಹಡಗಲಿ

ಇಟ್ಟಿಗಿ ಗ್ರಾಮದಲ್ಲಿ ವ್ಯಕ್ತಿ ಕಾಣೆ

ಇಟ್ಟಿಗಿ ಗ್ರಾಮದಲ್ಲಿ ವ್ಯಕ್ತಿ ಕಾಣೆ

ಹೂವಿನಹಡಗಲಿ 14 :  ತಾಲೂಕಿನ ಇಟ್ಟಿಗಿ ಗ್ರಾಮದ ವ್ಯಕ್ತಿಯೊಬ್ಬರು ಇತ್ತೀಚಿಗೆ ಕಾಣೆಯಾಗಿದ್ದಾರೆ.ಗ್ರಾಮದ ಮಹಾದೇವಪ್ಪ (30) ಕಾಣೆಯಾದ ವ್ಯಕ್ತಿ. ಇತ್ತೀಚಿಗೆ ಹಗರಿಬೊಮ್ಮನಹಳ್ಳಿಯಲ್ಲಿ ಕೆಲಸಕ್ಕೆ ತೆರಳುವುದಾಗಿ ತನ್ನ ತಂದೆಯ ಬಳಿ 100 ರೂ ಗಳನ್ನು ಪಡೆದು ಊರಿಗೆ ಹೋದವರು ರಾತ್ರಿಯಾದರೂ ಮನೆ ಬಂದಿಲ್ಲ. ನಂತರ  ತಮ್ಮ ಸಂಬಂಧಿಕರ ಮನೆಗಳಿಗೆ  ತೆರಳಿ ನೋಡಿದರೂ ಸಿಗದ ಕಾರಣ ಮಹಾದೇವಪ್ಪ ನವರು ತಂದೆ  ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ್ವಯ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ