ಜಮಖಂಡಿ

ಮನೆ ಕುಸಿದು ಬಿದ್ದು ವ್ಯಕ್ತಿ ಸಾವು: ಸಚಿವರಿಂದ ಕುಟುಂಬಸ್ಥರಿಗೆ ಸಾಂತ್ವಾನ

ಮನೆ ಕುಸಿದು ಬಿದ್ದು ವ್ಯಕ್ತಿ ಸಾವು: ಸಚಿವರಿಂದ ಕುಟುಂಬಸ್ಥರಿಗೆ ಸಾಂತ್ವಾನ

ಜಮಖಂಡಿ 16: ನಗರದಲ್ಲಿ ಸತತವಾಗಿ ನಾಲ್ಕೈದು ದಿನಗಳ ಕಾಲ ಸುರಿದ ಮಳೆಗೆ ಮನೆ ಮೇಲ್ಛಾವಣಿ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ ಕುಟುಂಬಸ್ಥನ ಮನೆಗೆ ಅಬಕಾರಿ ಸಚಿವ, ಜಿಲ್ಲಾ ಉಸ್ತುವಾರಿ ಆರಿ​‍್ಬ.ತಿಮ್ಮಾಪೂರ ಭೇಟಿ ನೀಡಿ, ಪರಿಹಾರದ ಚೆಕ್ ವಿತರಣೆ ಮಾಡಿ,  ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. 

ನಗರದ ಅವಟಿ ಗಲಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಸಾವನ್ನಪ್ಪಿದ ಮುಸ್ತಾಕ ಅವಟಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳುವ ಜೊತೆಗೆ ಯಾರಿಗಾದರೂ ಒಬ್ಬರಿಗೆ ಕೆಲಸ ಕೊಡಿಸುವ ಭರವಸೆಯನ್ನು ನೀಡಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಜಾನಕಿ, ಶಾಸಕ ಜಗದೀಶ ಗುಡಗುಂಟಿ,  ಮಾಜಿ ಶಾಸಕ ಆನಂದ ನ್ಯಾಮಗೌಡ, ತೌಫೀಕ ಪಾರತನಳಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ