ಶಿಗ್ಗಾವ್

ರಾಜ್ಯ ಪ್ರಶಸ್ತಿಗೆ ಮಾಲತೇಶ, ಶಶೀಧರ ಯಲಿಗಾರ ಭಾಜನ

ರಾಜ್ಯ ಪ್ರಶಸ್ತಿಗೆ ಮಾಲತೇಶ, ಶಶೀಧರ ಯಲಿಗಾರ ಭಾಜನ


ಲೋಕದರ್ಶನ ವರದಿ 

ಶಿಗ್ಗಾವಿ 26: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರ ಇಂದು ಮಲ್ಲೇಶ್ವರಂ ಬಳಿಯಿರುವ ಪ್ರಸಿದ್ದ ಚೌಡಯ್ಯ ಮೆಮೋರಿಯಲ್ ಹಾಲನಲ್ಲಿ ಪತ್ರಿಕೋದ್ಯಮ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿರುವ ವಿವಿಧ ಜಿಲ್ಲೆಗಳನ್ನೋಳಗೊಂಡು ಹಾವೇರಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಮಾಲತೇಶ ಅಂಗೂರ ಅವರಿಗೆ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಹಾಗೂ ಸಮಾಜಸೇವೆಯಲ್ಲಿ ಸಿ.ಬಿ.ಯಲಿಗಾರ ಸೇವಾಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ ಅವರಿಗೆ ಕೊರೋನಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸುಲಾಗುತ್ತಿದೆ.  

ಮಾಲತೇಶ ಅಂಗೂರ ಪರಿಚಯ : ಕಳೆದ 32 ವರ್ಷಗಳಿಂದ ಬೇರೆ ಬೇರೆ ಪತ್ರಿಕೆಯ ಅಂಕಣಗಳನ್ನು ಬರೆಯುವ ಮೂಲಕ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ವನ್ಯಜೀವಿ ಛಾಯಾಗ್ರಾಹಕರಾಗಿ ವನ್ಯಜೀವಿ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಇವರು ಸೆರೆಹಿಡಿದಿರುವ ವನ್ಯಜೀವಿ ಛಾಯಾಚಿತ್ರಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ  ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಸಹ ಪ್ರಕಟವಾಗಿವೆ. ಬಣ್ಣದಗರಿ, ಹಾವೇರಿಯಾಂವ ಎನ್ನುವ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಬಣ್ಣದ ಗರಿ ಕೃತಿಗೆ ಕಾಸರಗೋಡಿನ ಕರಾವಳಿ ಪ್ರತಿಷ್ಠಾನ ಪ್ರಶಸ್ತಿ, ಹಾವೇರಿಯಾಂವ ಕೃತಿಗೆ ಮೈಸೂರಿನ ಎನ್‌.ಎಸ್‌.ವಾಮನ ಪ್ರಶಸ್ತಿ ಲಭಿಸಿವೆ ಹೀಗೆ ಮಾಧ್ಯಮ ಆಕಾಡೆಮಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಶಶೀಧರ ಯಲಿಗಾರ ಪರಿಚಯ : ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯನ್ನು 2020 ರಲ್ಲಿ ಹುಟ್ಟು ಹಾಕಿ ಎರಡು ವರ್ಷದಲ್ಲಿ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ ಹಾವೇರಿ ಜಿಲ್ಲೆಯಲ್ಲಿ ಕೊಡುಗೈ ಧಾನಿಗಳಾಗಿ ಹೊರಹೊಮ್ಮಿದ್ದಾರೆ ಅಂದರೆ 725 ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಕನ್ನಡ ಶಾಲೆ ವಿಧ್ಯಾರ್ಥಿಗಳಿಗೆ ಕೊರೋನಾ 1 ನೇ ಅಲೆಯಲ್ಲಿ ಸನ್ಮಾನ, 800 ಜಿಲ್ಲಾ ಆಸ್ಪತ್ರೆಯ ಕೊರೋನಾ ವಾರಿಯರ್ಸಗಳಿಗೆ ಸನ್ಮಾನ, 1000 ಕ್ಷಯರೋಗಿಗಳಿಗೆ ಪೌಷ್ಠಿಕ ಡಬ್ಬ ವಿತರಣೆ, 800 ಅಪೌಷ್ಠಿಕತೆ ಮಕ್ಕಳಿಗೆ ಪೌಷ್ಠಿಕ ಡಬ್ಬ ವಿತರಣೆ, ಕೊರೋನಾ 2 ನೇ ಅಲೆಯಲ್ಲಿ ಸುಮಾರು 10 ಸಾವಿರ  ಪೌರಕಾರ್ಮಿಕರು, ಆಟೋಚಾಲಕರು ಹಾಗೂ ಮಾಲಕರು, ಛಾಯಾಗ್ರಾಹಕರು, ವಿಧವೆಯರು, ಮಂಗಳಮುಖಿಯರು, ವಿವಿಧ ಸಮುದಾಯದ ಬಡ ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ, ಸುಮಾರು ಶಿಗ್ಗಾವಿ ಸವಣೂರ ತಾಲೂಕಿನ 5 ರಿಂದ ಪದವಿಯವರೆಗೆ ಸುಮಾರು 75 ಲಕ್ಷ ಮೌಲ್ಯದ ಉಚಿತ ಬಸ ಪಾಸ ವಿತರಣೆ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಸೇವಾರತ್ನ ಪ್ರಶಸ್ತಿ, ಸಮಾಜಸೇವಾ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಮಹರ್ಷಿ ಡಾ.ಆನಂದ ಗುರೂಜಿಯವರು ವಹಿಸಿಕೊಳ್ಳಲಿದ್ದಾರೆ, ಮುಖ್ಯ ಅತಿಥಿಗಳಾಗಿ ಗಡಿನಾಡು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಟಿ.ಎಸ್‌.ನಾಗಾಭರಣ ಹಾಗೂ ಅಂತರಾಷ್ಟ್ರೀಯ ಸಂಸ್ಥೆಯಾದ ಆಕಾರ್ ಮ್ಯಾಕ್ಸ ವ್ಯವಸ್ಥಾಪಕ ನಿರ್ದೇಶಕ ಸ್ನೇಹ ರಾಖೇಶ ಅವರು ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ, ಕರ್ನಾಟಕ ರಾಜ್ಯ ಪ್ರೆಸ್ ಕ್ಲಬ್ ಕೌನ್ಸಿಲ್ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಕುರಗೋಡಿ, ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕೆಂದು ಕರ್ನಾಟಕ ರಾಜ್ಯ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ.ಶಿವಕುಮಾರ ಮನವಿ ಮಾಡಿದ್ದಾರೆ. 


ಸುದ್ದಿ ಓದಿ