ಮಳಿಮಲ್ಲೇಶ್ವರ ಜಾತ್ರಾ ಮಹೋತ್ಸವ: ಖ್ಯಾತ ಕಲಾವಿದರಿಂದ ಸಂಗೀತ ಸಂಜೆ
ಯರಗಟ್ಟಿ 05 : ಸಮೀಪದ ಸತ್ತಿಗೇರಿ ಗ್ರಾಮದ ಮಳಿಮಲ್ಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು.
ಸವದತ್ತಿ ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಂಸ್ಕೃತಿ ಮತ್ತು ಸಂಗೀತ ಎಂಬುದು ನಮ್ಮ ಮಕ್ಕಳಿಗೆ ವಜ್ರಕವಚ ಇದ್ದಂತೆ. ಅದು ಮನೋವಿಕಾರವನ್ನು ದೂರ ಮಾಡುತ್ತದೆ. ಅಲ್ಲದೆ ಮನುಷ್ಯನನ್ನು ದೈವತ್ವಕ್ಕೆ ಕೊಂಡೊಯ್ಯುವ ಶಕ್ತಿ ಸಹ ಇದೆ ಎಂದು ಹೇಳಿದರು.ಈ ಭಾಗದ ಮಕ್ಕಳಿಗೆ ಪರಂಪರೆ, ಭಾರತೀಯ ಸಂಗೀತದ ಜ್ಞಾನ ನೀಡುವ ಉದ್ದೇಶದಿಂದ ಇಂಥ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.ಶೀಘ್ರದಲ್ಲೇ ಸತ್ತಿಗೇರಿ ಏತನೀರಾವರಿ ಕಾಮಗಾರಿಗೆ ಚಾಲನೆ ನೀಡಿಲಾಗುವುದು ಹಾಗೂ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಂಗೀತ ಕಲಾವಿದ ಕನ್ನಡ ಕೋಗಿಲೆ ಮಹನ್ಯ ಪಾಟೀಲ, ಕನ್ನಡ ಕೋಗಿಲೆ ಕಾಸಿಂ ಅಲಿ, ಖ್ಯಾತ ನಿರೂಪಕ ಡಾ.ಗುರು ಪಾಟೀಲ, ಹಾಸ್ಯ ನಟ ಮಿಮಿಕ್ರಿ ಗೋಪಿ, ಕನ್ನಡ ಕೋಗಿಲೆ ಕಲಾವಿದರು ಹಾಗೂ ಡಿ.ಕೆ.ಡಿ ಕಲಾವಿದರಿಂದ ಸಂಗೀತ ಸೂರಿಮೇಳ.ಈ ಸಂದರ್ಭದಲ್ಲಿ ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗೋಜಿಕೊಪ್ಪ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ, ಬಂಗಾರ್ಪ ಹರಳಿ, ಗೌಡಪ್ಪ ಸವದತ್ತಿ, ಪ್ರಕಾಶ ವಾಲಿ, ಜಾಫರ ಲಿಂಬುವಾಲೆ, ಶಿವಾನಂದ ಬಳಿಗಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಈರಣ್ಣಾ ಚಂದರಗಿ, ಶಂಕರ ಇಟ್ನಾಳ, ಲಕ್ಷ್ಮಣ ನಾಯ್ಕರ, ನಾಗಪ್ಪ ಕರಲಿಂಗಪ್ಪನವರ, ಸುಧೀರ ಗೋಡಿ, ಶಾನೂರ ಮುಲ್ಲಾ, ಪಿಎಸ್ಐ ಆಯ್ ಎಂ ಹಿರೇಗೌಡರ, ಮಲಿಕಸಾಬ ಬಾಗವಾನ, ಡಾ. ಎಸ್. ವಿ. ವಾಲಿ, ಶಿವಾನಂದ ಅವರಾದಿ, ಗುರ್ಪ ಶೆಟ್ಟರ, ಎಸ್. ಪಿ. ಕರಲಿಂಗಪ್ಪನವರ, ಶ್ರೀಶೈಲ ಯರಗಣವಿ ಸೇರಿದಂತೆ ಅನೇಕ ಇದ್ದರು.