ಯರಗಟ್ಟಿ

ಮಳಿಮಲ್ಲೇಶ್ವರ ಜಾತ್ರಾ ಮಹೋತ್ಸವ

ಮಳಿಮಲ್ಲೇಶ್ವರ ಜಾತ್ರಾ ಮಹೋತ್ಸವ

ವರದಿ ಈರಣ್ಣಾ ಹುಲ್ಲೂರ, ಯರಗಟ್ಟಿ 

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಸತ್ತಿಗೇರಿ  ಗ್ರಾಮದ ಶ್ರೀ ಮಳಿಮಲ್ಲೇಶ್ವರ  ಶ್ರೀ ಮಠದ ನೂತನ ಕಟ್ಟಡದ ಉದ್ಘಾಟನೆ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 16-02-2024 ರಿಂದ  04-03-2024 ರವರೆಗೆ ಜರುಗುತ್ತಿವೆ ಶ್ರೀ ಷ ಭ್ರ ಚಂದ್ರಶೆಖರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಸತ್ತಿಗೇರಿ ಅವರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ಉಜೈನಿ ಸನ್ನಿದಿಯವರ ಅಡ್ಡ ಪಲ್ಲಕ್ಕಿ ಮಹೋತ್ಸವ ವಿಜೃಂಭನೆಯಿಂದ ಜರುಗುತ್ತಿದೆ ಈ ಕಾರ್ಯಕ್ರಮದಲ್ಲಿನಾಡಿನ ಹಲವಾರು ಮಠಾಧೀಶರು ರಾಜಕೀಯ ಧುರೀಣರು ಆಗಮಿಸುತ್ತಾರೆ. ಸಿದ್ದಾಂತ ಶಿಖಾಮಣಿ ಪ್ರವಚನ ವನ್ನು ಮೂಲಿಮಠದ ಪರಮ ಪೂಜ್ಯ ಮಲ್ಲಿಕಾಜುನಸ್ವಾಮಿಗಳು ನಡೆಸಿಕೊಡುತ್ತಾರೆ 

ಮಠದ ಹಿನ್ನೆಲೆ-ಸುಮಾರು 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿಉಜೈನಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಸಿದ್ದ ಮಲ್ಲೇಶ್ವರ ಸ್ವಾಮಿಗಳು ಬರಗಾಲ ಪೀಡಿತ ನೀರಿಲ್ಲದ ಪ್ರದೇಶಗಳಿಗೆ ಬಂದು ತಪಸ್ಸು ಮಾಡಿ ಮಳೆ ಬರಿಸುವಂತೆ ಮಾಡುತ್ತಿದ್ದರು ಹಾಗೇ ಅವರು ಊರಿಂದ ಊರಿಗೆ ಬಂದು ಸತ್ತಿಗೇರಿ ಗ್ರಾಮಕ್ಕೆ ತಲುಪಿ ಇಲ್ಲಿ ತಪಸ್ಸು ಮಾಡಿ ಮಳೆ ಬರಿಸಿದರೆಂದು ಪ್ರತೀತಿ. ಅವರ ತಪೋಭೂಮಿಯಲ್ಲಿ ಸ್ಥಾಪಿತವಾದ ಮಠವೇ ಶ್ರೀ ಮಳಿ ಮಲ್ಲೇಶ್ವರ ಮಠ. ಇವರಿಗೆ ಸಂತಾನ ಮಲ್ಲೇಶ್ವರ ಎಂತಲೂ ಕರೆಯುವದು ವಾಡಿಕೆ ಈ ಮಠಕ್ಕೆ ಈಗಾಗಲೆ ಹನ್ನೊಂದು ಪೀಠಾಧಿಪತಿಗಳಾಗಿದ್ದು ಸದ್ಯದ  ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮಿಜಿಯವರು ಹನ್ನೆರಡನೆ ಸ್ವಾಮಿಜಿಯವರಾಗಿದ್ದಾರೆ ಹಿಂದಿನ ಸ್ವಾಮಿಜಿ ಲಿಂಗೈಕ್ಯ ಷ ಭ್ರ ಶ್ರಿ ಶಿವಲಿಂಗ ಶಿವಾಚಾರ್ಯಸ್ವಾಮಿಗಳು ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾದವರು. 

ಮಠದ ಮಹತ್ವ-ವೀರಶೈವ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಪಂಚಪೀಠಗಳ  ಮಹತ್ವವನ್ನು ಸಾರುವ ಕೆಲಸವನ್ನು ಈ ಮಠ ಮಾಡುತ್ತಿದೆ. ಷಟಸ್ಥಲಗಳು, ಪಂಚಾಚಾರ್ಯರು ಮತ್ತು  ಅಷ್ಥಾವರಣಗಳ ಬಗ್ಗೆಭಕ್ತರಿಗೆ ತಿಳಿಯಪಡಿಸುವದು ಶ್ರೀ ಮಠದ ಕರ್ತವ್ಯವಾಗಿದೆ.ಶೋಡಶ ಸಂಸ್ಕಾರವನ್ನು ಕೊಡುವ ಕೆಲಸವನ್ನು ಶ್ರೀಮಠ ಮಾಡುತ್ತದೆ  ಇದು ಉಜೈನಿ ಶಾಖಾ ಮಠವಾಗಿದ್ದು ಹಳೆಯ ಕಟ್ಟಡ ನವೀಕೃತಗೊಂಡು ಹೊಸ ಮಠ ನಿರ್ಮಾಣವಾಗಿ ಈಗ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವು ನಡೆಯುತ್ತಿದೆ ಶ್ರೀಮಠದ ಕರ್ತೃ ಗದ್ದುಗೆಯು ಅತ್ಯಂತ ಶಕ್ತಿಯುತವಾಗಿದ್ದು  ಬೇಡಿದ ಭಕ್ತರಿಗೆ ವರವನ್ನು ದಯಪಾಲಿಸುವ ಕಾರ್ಯವನ್ನು ಯಾವಾಗಲು ಶ್ರಿ ಮಳಿ ಮಲ್ಲೇಶ್ವರ ಮಾಡುತ್ತಾನೆ ಎನ್ನುವ ನಂಬಿಕೆ ಇದೆ. 

ವೀರಶೈವ ಅಧ್ಯಯನದಲ್ಲಿ ಬಹುತೇಕ ಇಡಿಯಾಗಿ ಅಧ್ಯಯನ ನಡೆಯದೆ ಬಿಡಿಯಾಗಿ ನಡೆದ ಕಾರಣ ಇನ್ನು ನಿರ್ಧಿಷ್ಟ ವಿಷಯ ಬೆಳಕಿಗೆ ಬಂದಿಲ್ಲ, ಹೀಗಾಗಿ ಇತಿಹಾಸ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು ಶ್ರೀಮಠದಂತೆ ನಮ್ಮೂರಿನಲ್ಲಿಯೂ ಮಠಗಳ ಪರಂಪರೆ ಬೆಳೆದು ಬಂದ ಹಾದಿ ಮತ್ತು ಅಲ್ಲಿಯ ಸಾಂಸ್ಕೃತಿಕ ಸಾಹಿತ್ಯದ ಬೆಳವಣಿಗೆಗೆ ಪೂರಕ ಅಂಶಗಳು ಹೊರ ಬರುವಂತೆ ಮುಂದಿನ ಪೀಳಿಗೆಗೆ ಸತ್ಯ ತಿಳಿಸುವ ಕೆಲಸವಾಗಬೇಕು. ಶಾಸನ ಸಾಹಿತ್ಯದಲ್ಲಿ ವಿಜಯನಗರ ಕಾಲದಲ್ಲಿಯೇ ಮಳಿಮಲ್ಲೇಶ್ವರ ಮಠದ ಇತಿಹಾಸ ಕಂಡು ಬರುತ್ತದೆ. ಗುರುಪರಂಪರೆ, ವಚನ ಪರಂಪರೆ, ದಾಸೋಹ ಸಾಹಿತ್ಯ ವೀರಶೈವ ಪರಪಂಪರೆ ಎರಡರಲ್ಲೂ ಕಾಣಬಹುದು. 

ಶ್ರೀ ಗುರು ವಾಲಿ 

ಉಪಾಧ್ಯಕ್ಷರು ಗ್ರಾಮ ಪಂಚಾಯತ ಸತ್ತಿಗೇರಿ 


ಸುದ್ದಿ ಓದಿ