ಯರಗಟ್ಟಿ

ಯರಗಟ್ಟಿಯನ್ನು ತಾಲೂಕ ಕೇಂದ್ರವನ್ನಾಗಿ ಮಾಡಿದ್ದು ಸಂತೋಷ: ವೈದ್ಯ

ಯರಗಟ್ಟಿಯನ್ನು ತಾಲೂಕ ಕೇಂದ್ರವನ್ನಾಗಿ ಮಾಡಿದ್ದು ಸಂತೋಷ: ವೈದ್ಯ

ಯರಗಟ್ಟಿ 03: ಯರಗಟ್ಟಿಯನ್ನು ತಾಲೂಕ ಕೇಂದ್ರವನ್ನಾಗಿ ಮಾಡಿದ್ದು ನಿಜಕ್ಕೂ ಕೂಡ ಸಂತೋಷದ ಸಂಗತಿ.ಈ ಭಾಗದ ಜನರಿಗೆ ಸ್ಪೂತರ್ಿ ತುಂಬಿದಂತಾಗಿದೆ. ಯರಗಟ್ಟಿ ಸುತ್ತಮುತ್ತಲು ಅನೇಕ ಗ್ರಾಮಗಳಿದ್ದು ಅನೇಕ ಗ್ರಾಮಗಳಿಂದ ಎಲ್ಲ ರೈತ ಬಾಂಧವರಿಗೆ ಯರಗಟ್ಟಿ ತಾಲೂಕು ಅವಶ್ಯಕತೆ ಇತ್ತು ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯರಗಟ್ಟಿ ತಾಲೂಕು ಆದ ನಂತರ ಇಲ್ಲಿ ಬೇಕಾಗಿರುವ ಕಚೇರಿಗಳು ಇನ್ನೂ ಕೆಲವೊಂದಿಷ್ಟು ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಆದಷ್ಟು ಬೇಗನೆ ಕಚೇರಿಗಳನ್ನು ಯರಗಟ್ಟಿಗೆ ಸ್ಥಳಾಂತರಿಸಲು ತಮ್ಮೆಲ್ಲರ ಸಹಕಾರದಿಂದ ಈ ಭಾಗದ ಜನರಿಗೆ ಅನುಕೂಲವಾಗಿರುವ ಎಲ್ಲ ಕಚೇರಿಗಳನ್ನು ಸ್ಥಾಪಿಸಲು ಶ್ರಮಿಸುತ್ತೇನೆ. ಈ ಭಾಗದ ಜನರಿಗೆ ಕುಡಿಯುವ ನೀರು, ರಸ್ತೆ, ಒಳ ಚರಂಡಿ ವ್ಯವಸ್ಥೆ, ಶಿಕ್ಷಣ, ಮತ್ತು ಈ ಭಾಗದ ಜನರಿಗೆ ಸರಕಾರಿ ಆಸ್ಪತ್ರೆ ಇದ್ದರೂ ಸಹಿತ ನುರಿತ ವೈದ್ಯಾಧಿಕಾರಿಗಳು ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಇಲ್ಲ. ಈ ಭಾಗದ ಜನರಿಗೆ ಆರೋಗ್ಯ ಕೇಂದ್ರದ ಕುಂದು ಕೊರತೆಗಳನ್ನು ಹೋಗಲಾಡಿಸುತ್ತೇನೆ ಮತ್ತು ನುರಿತ ವೈದ್ಯಾಧಿಕಾರಿಗಳನ್ನು ಈ ಆಸ್ಪತ್ರೆಗೆ ಕರೆತರಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ವಿಧಾನಸಭಾಚುನಾವಣೆಯಲ್ಲಿ ನನಗೆ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಶೀವರ್ಾದ ಮಾಡಿದ್ದೀರಿ. ಈ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಇನ್ನುವರೆಗೂ ನನ್ನ ಕಾರ್ಯಕರ್ತರು ತಲೆ ತಗ್ಗಿಸುವಂತಹ ಕೆಲಸ ಮಾಡಿಲ್ಲ ಮುಂದು ಮಾಡೋದಿಲ್ಲ ನಮ್ಮ ಕಾರ್ಯಕರ್ತರೇ ನನ್ನ ಉಸಿರು ಎಂದು ಹೇಳಿದರು. ಈ ನಮ್ಮ ಕ್ಷೇತ್ರದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತೇನೆ. ಸವದತ್ತಿ ಯಲ್ಲಮ್ಮ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.ಯರಗಟ್ಟಿಯಲ್ಲಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವವನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ನೆರವೇರಿಸುವುದನ್ನು ನಿಜಕ್ಕೂ ಕೂಡ ಶ್ಲಾಘನೀಯ.ಐದು ವರ್ಷಕ್ಕೆ ಒಮ್ಮೆ ನಡೆಯುವ ಗ್ರಾಮ ದೇವತೆಯರ ಜಾತ್ರೆಯನ್ನು ಬರು ಬರುತ್ತಾ ಅತಿ ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಹೇಳಿದರು.ಗಣಪತಿ ಮಹಾರಾಜರು, ಅಜಿತ ದೇಸಾಯಿ, ನಿಖಿಲ ದೇಸಾಯಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಲಕ್ಷ್ಮಣ ಕುಂಟಿರಪ್ಪಗೊಳ, ಚಾಯಪ್ಪ ಹುಂಡೆಕಾರ, ಬಂಗಾರಪ್ಪ ಹರಳಿ, ಗೋಪಾಲ ದಳವಾಯಿ, ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ