ತಾಳಿಕೋಟಿ

ಗ್ರಾಮವಾಸ್ತವ್ಯದ ಸದುಪಯೋಗ ಮಾಡಿಕೊಳ್ಳಿ: ತಹಶೀಲ್ದಾರ ಗೋಟೂರ

ಗ್ರಾಮವಾಸ್ತವ್ಯದ ಸದುಪಯೋಗ ಮಾಡಿಕೊಳ್ಳಿ: ತಹಶೀಲ್ದಾರ ಗೋಟೂರ

ತಾಳಿಕೋಟಿ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಸರ್ಕಾರದ ವಿನೂತನ ಕಾರ್ಯಕ್ರಮ ಸರ್ಕಾರವನ್ನು ಜನರ ಬಳಿ ತೆಗೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಅಲ್ಲಿಯೇ ಇತ್ಯರ್ಥಗೊಳಿಸುವ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಗ್ರಾಮೀಣ ಜನರು ಇದರ ಸದುಪಯೊಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಶ್ರೀಧರ ಗೋಟೂರ ತಿಳಿಸಿದರು. 

ಜಿಲ್ಲಾಡಳಿತ ವಿಜಯಪೂರ ಹಾಗೂ ತಾಲೂಕಾಡಳಿತ ತಾಳಿಕೋಟಿ ಇವರ ಸಹಯೊಗದಲ್ಲಿ ಕೊಡಗಾನೂರ ಗ್ರಾಮದಲ್ಲಿ ಆಯೋಜಿಸಿದ “ಗ್ರಾಮ ವಾಸ್ತವ್ಯ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 3ನೇ ವಾರ ಒಂದು ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳನ್ನು ತೆಗೆದುಕೊಂಡು ಇಂಥಹ ಕಾರ್ಯಕ್ರಮವನ್ನು ನಡೆಸಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರಬೇಕು ಕೇವಲ ಒಂದೇ ದಿನದಲ್ಲಿ ನಿಮ್ಮೆಲ್ಲ ಸಮಸ್ಯೆಗಳು ಪರಿಹರಿಸಲು ಸಾಧ್ಯವಿಲ್ಲ ಆದ್ದರಿಂದ ಲಿಖಿತ ರೂಪದಲ್ಲಿ ಅರ್ಜಿಗಳನ್ನು ಕೊಡಲು ಮರೆಯದಿರಿ ಎಂದರು.  

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ವಿವರಣೆ ನೀಡಿದರು. ಗ್ರಾಮಸ್ಥರಿಂದ ಮುಖ್ಯವಾಗಿ ಕುಡಿಯುವ ನೀರು, ಶೌಚಾಲಯ, ಆಶ್ರಯ ಮನೆಗಳು ಹಾಗೂ ವಿಶೇಷವಾಗಿ ಈ ಬಾರಿ ಈ ಭಾಗದ ರೈತರಿಗೆ ಬೆಳೆ ವಿಮೆ ಸಿಗದೆ ಇರುವದರ ಕುರಿತು ವಿಷಯವನ್ನು ಪ್ರಾಸ್ತಾಪಿಸಲಾಯಿತು. ಈ ಎಲ್ಲ ಪ್ರಶ್ನೆಗಳಿಗೆ ಮಾನ್ಯ ತಹಶಿಲ್ದಾರರು ಸಮ್ಮಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಉತ್ತರ ಕೊಡಸಿದರು. ಕೊಡಗಾನೂರ ಗ್ರಾಮದಲ್ಲಿ ಸಂಪೂರ್ಣವಾಗಿ ಮದ್ಯಪಾನವನ್ನು ನಿಷೇಧಿಸಬೆಕೆಂದು ಗ್ರಾಮದ ಮಹಿಳೆಯರು ಕೆಳಿಕೊಂಡಾಗ ಅಬಕಾರಿ ಅಧಿಕಾರಿಗಳು ಕೆವಲ ಎರಡು ದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಬಂದ ಮಾಡಲು ಕ್ರಮ ಜರುಗಿಸಲಾಗುವುದು ಎಂದರು. 

ಸುಕನ್ಯಾ ಸಮೃದ್ಧಿ ಪಾಸಬುಕ್, ಪಿಂಚಣಿ ಪ್ರಮಾಣ ಪತ್ರ, ಆಯುಷ್ಮಾನ ಭಾರತ ಕಾರ್ಡ, ತಾಯಿಕಾರ್ಡ ಅದರ ಫಲಾನುಭವಿಗಳಿಗೆ ವಿತರಿಸಲಾಯಿತು. 

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಲವಂತ್ರಾಯಗೌಡ ಬಿರಾದಾರ, ಕೊಡಗಾನೂರ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ, ಪಿಡಿಓ ಕಿರಣಗಿ, ಪಿಡಬ್ಲ್ಯೂಡಿ ಅಭಿಯಂತರ ಡಿ ಬಿ ಕಲಬುರ್ಗಿ, ಸಮಾಜಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಕೃಷಿ ಅಧಿಕಾರಿ, ಮಹಿಬೂಬ ಬಿಳಗಿ, ಅರಣ್ಯಾಧಿಕಾರಿ ಮಹಾಂತೇಶ ಹಾದಿಮನಿ, ಸಿಆರ್‌ಸಿ ಸಂಗಮೇಶ ಪಾಲ್ಕಿ, ಅಬಕಾರಿ ಅಧಿಕಾರಿ ಹೊಸಮನಿ ಕಂದಾಯ ಇಲಾಖೆಯ ಶಿವಾನಂದ ಅಂಗಡಿ, ಜೆ ಸಿ ಹಾರಿವಾಳ, ಜಟ್ಟೇಪ್ಪ ಪಾಯಪ್ಪಗೊಳ,  ಗ್ರಾ.ಪಂ. ಸದಸ್ಯರು ಇದ್ದರು. 


ಸುದ್ದಿ ಓದಿ