ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ: ಡಾ.ಹೂಗಾರ
Make the Pulse Polio Program a success: Dr. Hoogara
ತಾಳಿಕೋಟಿ 25: ತಾಲೂಕಿನಾದ್ಯಂತ ಜೂನ್ 28 ರಿಂದ ಜುಲೈ 1 2026 ರವರೆಗೆ ರಾಷ್ಟ್ರೀಯ ಪಲ್ಸ ಪೋಲೀಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 0 ದಿಂದ 5 ವರ್ಷದ ಯಾವುದೇ ಒಂದು ಲಸಿಕೆಯಿಂದ ವಂಚಿತರಾಗದಂತೆ ಪೋಷಕರು 2 ಹನಿ ಲಸಿಕೆ ಹಾಕಿಸಬೇಕು ಎಂದು ಮಾನ್ಯ ತಹಸಿಲ್ದಾರ ವಿನಯಾ ಹೂಗಾರ ಮನವಿ ಮಾಡಿದರು. ಗುರುವಾರ ತಹಸಿಲ್ದಾರ ಕಚೇರಿಯಲ್ಲಿ ನಡೆದ ಪಲ್ಸ ಪೋಲೀಯೋ ಲಸಿಕಾ ಸಮಿಕಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೂನ್ - 28 ರಿಂದ ಪ್ರತಿ ಭೂತಗಳಲ್ಲಿ ಲಸಿಕೆ ನೀಡಲಾಗುವುದು.
ನಂತರ 3 ದಿನಗಳ ಕಾಲ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಮನೆ- ಮನೆಗೆ ತೆರಳಿ ಮಕ್ಕಳಿಗೆ ಪೋಲೀಯೋ ಹನಿ ಹಾಕಲಿದ್ದಾರೆ ಎಂದು ತಿಳಿಸಿದರು. ಪ್ರತಿ ಗ್ರಾಮಗಳಲ್ಲಿ ಕರ ಪತ್ರಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುಬೇಕು ಶಾಲಾ ಮಕ್ಕಳಿಂದ ಜಾಗ್ರತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡಾ. ಶ್ರೀಶೈಲ ಹುಕ್ಕೇರಿ ಆಡಳಿದ ವೈದ್ಯಾಧಿಕಾರಿಗಳು ತಾಳಿಕೋಟಿ ಮಾತನಾಡಿ ತಾಲೂಕಿನಾದ್ಯಂತ 5 ವರ್ಷದೊಳಗಿನ ಒಟ್ಟು ಮಕ್ಕಳು 11112 ಮಕ್ಕಳು ಲಸಿಕೆ ಪಡೆಯಲ್ಲಿದ್ದು 62 ಭೂತಗಳನ್ನು ಸ್ಥಾಪಿಸಲಾಗಿದೆ.
ಪ್ರತಿ ಭೂತಗೆ ಇಬ್ಬರು ಸದಸ್ಯರು 5 ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ. ಶಿವಪ್ಪ. ಕನ್ನೊಳಿ ಮಲ್ಲಿಕಾರ್ಜುನ. ಕೊಳ್ಳಿ, ಸುರೇಶ.ಅಂಬಣ್ಣನವರ, ಕಿಶೋರಕುಮಾರ ಕೆ. ಖಏ ಕಾಲೇಜ್ ತಾಳಿಕೋಟಿ, ಆರೋಗ್ಯ ಇಲಾಖೆಯ ಅನಸುಯಾ ತೇರದಾಳ ಆರೋಗ್ಯ ಶಿಕ್ಷಣಾಧಿಕಾರಿಗಳು, ಎಫ್.ಎ. ಅತ್ತಾರ ಕಿ.ಆ. ನೀರೀಕ್ಷಣಾಧಿಕಾರಿ, ಕಾಂಚನಾ.ಪಾಟೀಲ. ಕಿ.ಆ. ನೀರೀಕ್ಷಣಾಧಿಕಾರಿ ಎನ್.ಎಚ್. ಬೋರಗಿ ಠಿಛಿಠ, ಎಮ್.ಎಸ್. ಟಕ್ಕಳಕಿ ಠಿಛಿಠ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 