ತಾಳಿಕೋಟಿ

ಸ್ಮಶಾನ ರಕ್ಷಣೆ ಮಾಡಿ, ಚಿತಾಗಾರ ನಿರ್ಮಾಣ ಮಾಡಿ

ಸ್ಮಶಾನ ರಕ್ಷಣೆ ಮಾಡಿ, ಚಿತಾಗಾರ ನಿರ್ಮಾಣ ಮಾಡಿ


ತಾಳಿಕೋಟೆ10: ತಾಲೂಕಿನ ಅಸ್ಕಿ ಗ್ರಾಮದಲ್ಲಿರುವ ಸ್ಮಶಾನ ಜಾಗದಲ್ಲಿ ಚಿತಾಗಾರ ನಿರ್ಮಾಣ ಮಾಡಬೇಕು ಹಾಗೂ ಸ್ಮಶಾನ ಜಾಗ ಅಳತೆ ಮಾಡಿ ಅದರ ಸುತ್ತಲು ಗುರುತು ಪತ್ತೆ ಮಾಡಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮದ ಯುವಕರು ತಹಶಿಲ್ದಾರ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. 

ಅಸ್ಕಿ ಗ್ರಾಮದಲ್ಲಿ ಸರ್ವೆ ನಂ 134 ರಲ್ಲಿ 25 ಗುಂಟೆ ಜಮೀನನ್ನು ಸ್ಮಶಾನ ಭೂಮಿಯನ್ನಾಗಿ ಗುರುತಿಸಲಾಗಿದೆ. ಈ ಕುರಿತು ಸರ್ಕಾರದಿಂದ ಆದೇಶ ಕೂಡಾ ಆಗಿದೆ. ಆದರೆ ಈ ಜಾಗ ಸರ್ವೆಯಾಗಿರುವದಿಲ್ಲ. ಇದರಿಂದ ಸ್ಮಶಾನ ಜಾಗ ಒತ್ತಿವರಿಯಾಗಿರುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಮಶಾನ ಜಾಗದ ತೊಂದರೆಯಾಗುತ್ತಿರುವ ಸಾಧ್ಯತೆ ಇದೆ. ಇದಲ್ಲದೆ ಶವವನ್ನು ಸುಡಲು ಚಿತಾಗಾರ ಇರುವದಿಲ್ಲ. ಇತ್ತಿಜಿಗೆ ಅಕಾಲಿಕವಾಗಿ ಹಾಗೂ ದುರ್ಮಣ ಹೊಂದಿದ ಸಂದರ್ಭದಲ್ಲಿ ಶವವನ್ನು ಸುಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಸಂದರ್ಭದಲ್ಲಿ ಶವ ಸುಡಲು ಸಾಧ್ಯವಾಗದೇ ಸಾರ್ವಜನಿಕರು ಪರದಾಟ ನಡೆಸುವಂತಾಗಿದೆ. ಸ್ಮಶಾನ ಜಾಗ ಗುರುತಿಸಿದ ಸರ್ವೆ ನಂ 134ನ್ನು ಸರ್ವೆ ಮಾಡಿಸಿ ಬಾಂಢರಿ ಗುರುತಿಸಿ, ತಂತಿ ಬೇಲಿ ಹಾಕಿಸಬೇಕು. ಗ್ರಾಮದ ಸ್ಮಶಾನ ಜಾಗದಲ್ಲಿ ಎಲ್ಲ ಸೌಲಭ್ಯಗಳನ್ನೊಳಗೊಂಡ ಚಿತಾಗಾರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಮನವಿಯನ್ನು ಸ್ವಿಕರಿಸಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯಿಂದ ಮಾಡಿಸಲಾಗುವದು. ತಂತಿ ಬೇಲಿ ಹಾಗೂ ಚಿತಾಗಾರ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವದು ಎಂದರು. 

 ಗ್ರಾಮ ಯುವ ಮುಖಂಡರಾದ ವಿಶ್ವನಾಥ ತಳವಾರ, ದೇವಿಂದ್ರ ಕವಡಿಮಟ್ಟಿ, ಭಿಮಪ್ಪ ಬಜಂತ್ರಿ, ಸುನೀಲ, ಹಣಮಗೌಡ ಬಿರಾದಾರ, ವಿರೇಶ ಹಿರೇಮಠ, ಮಹೇಶ ಅವಟಿ, ಸಾಗರ ಹಿರೇಮಠ, ಅರುಣ ಹಿರೇಮಠ, ಗುರುಸಿದ್ದಪ್ಪಗೌಡ ಬಿರಾದಾರ, ನೀಖೀಲ ಬಸರಡ್ಡಿ, ಸಂತೋಷ ಹಡಪದ, ಭರತ ಖಾನಾಪೂರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ