ಹೂವಿನ ಹಡಗಲಿ

ಮೆಕ್ಕೆಜೋಳ ತೆನೆ ರಾಶಿ ಬೆಂಕಿಗೆ ಆಹುತಿ; ಲಕ್ಷಾಂತರ ನಷ್ಟ

ಮೆಕ್ಕೆಜೋಳ ತೆನೆ ರಾಶಿ ಬೆಂಕಿಗೆ ಆಹುತಿ; ಲಕ್ಷಾಂತರ ನಷ್ಟ

ಮೆಕ್ಕೆಜೋಳ ತೆನೆ ರಾಶಿ ಬೆಂಕಿಗೆ ಆಹುತಿ; ಲಕ್ಷಾಂತರ ನಷ್ಟ 

ಹೂವಿನಹಡಗಲಿ 22: ಬೆಂಕಿ ತಗುಲಿ ಲಕ್ಷಾಂತರ ರೂ.ಮೌಲ್ಯದ ಮೆಕ್ಕೆಜೋಳ ತೆನೆ ರಾಶಿ ಬೆಂಕಿಗೆ ಆಹುತಿ ಯಾದ ಘಟನೆ ತಾಲ್ಲೂಕಿನಮಿರಾಕೊರನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.  ಜಮೀನಿನಲ್ಲಿ ಸಂಗ್ರಹಿಸಿದ ಮೆಕ್ಕೆಜೋಳ ತೆನೆ ರಾಶಿಗೆ ಸಂಬಂಧಿಸಿದ ರೈತರಾದ ಎಂ. ಶಿವಕುಮಾರ್, ಬಾರಿಕೇರ ಹಾಲೇಶ, ಎಚ್‌.ನಾಗರಾಜ ಎಂಬುವವರಿಗೆ ಸೇರಿದ ಮೆಕ್ಕೆಜೋಳ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟ ಭಸ್ಮವಾಗಿದೆ.  

ತೆನೆರಾಶಿಗೆ  ರಾತ್ರಿ ವೇಳೆ ಬೆಂಕಿ ಬಿದ್ದಿದ್ದು, ರೈತರು  ಬೆಳಿಗ್ಗೆ ನೋಡುವಷ್ಟರಲ್ಲಿ ಸಂಪೂರ್ಣ  ಸುಟ್ಟು ಹೋಗಿದೆ. ಅಗ್ನಿಶಾಮಕದಳ ರೈತ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.ಮೂವರು ರೈತರು ಪ್ರತ್ಯೇಕವಾಗಿ  ತೆನೆ ರಾಶಿಗಳನ್ನು ಸಂಗ್ರಹಿಸಿದ್ದು,  ರಾಶಿಗಳಿಗೆ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವಿಲ್ಲ. ಇದು ಕಿಡಿಗೇಡಿಗಳು ದುಷ್ಟಕ್ರತ್ಯ ಮಾಡಿರಬಹುದು ಎಂದು ರೈತರು  ಅನುಮಾನ ವ್ಯಕ್ತಪಡಿಸಿದ್ದಾರೆ."ಬಿತ್ತನೆ, ಬೆಳೆ ನಿರ್ವಹಣೆಗಾಗಿ  3 ಲಕ್ಷ ರೂ. ಖರ್ಚು ಮಾಡಿದ್ದೇವೆ.ಬೆಳೆ ನಂಬಿ ಸಾಲ ಮಾಡಿದ್ದೇವೆ ಎನ್ನುತ್ತಾರೆ ರೈತರ ಅಳಲು ತೋಡಿಕೊಂಡಿದ್ದಾರೆ.ಸ್ಥಳಕ್ಕೆ ಶಾಸಕ ಕ್ರಷ್ಣನಾಯ್ಕ.ತಹಶೀಲ್ದಾರ ಸಂತೋಷಕುಮಾರ.ಕ್ರಷಿ ನಿರ್ದೇಶಕ ಮಹ್ಮದ್ ಆಶ್ರಫ್ ಭೇಟಿ ನೀಡಿ ಪರೀಶೀಲಿಸಿದರು. 


ಸುದ್ದಿ ಓದಿ