ಗೋಕಾಕ್

ಮೆಕ್ಕೆಜೋಳದ ಕ್ಷೇತ್ರೋತ್ಸವ

ಮೆಕ್ಕೆಜೋಳದ ಕ್ಷೇತ್ರೋತ್ಸವ

ಗುರ್ಲಾಪುರ(14): ಸಮೀಪದ ಖಾನಟ್ಟಿ ಗ್ರಾಮದ ಪ್ರಗತಿ ಪರ ರೈತ ಸಿದ್ದಪ್ಪ ಗಿಡ್ಡನ್ನವರ ಇವರ ಜಮೀನದಲ್ಲಿ ಇತ್ತೀಚಿಗೆ ಅಡ್ವಂಟ(768)ಕಂಪನಿಯ ಮೆಕ್ಕೆಜೋಳದ ಕ್ಷೇತ್ರೋತ್ಸವದಲ್ಲಿ ಆಯೋಜಿಸಲಾಯಿತು.

ಅಡ್ವಂಟ ಕಂಪನಿಯ ಮೇಲವಿಚಾರಕ ಕೆಂಪ್ಪಣ ಹಂಜಿ ಇವರು ರೈತರಿಗೆ ನಮ್ಮ ಕಂಪನಿಯ ಬೀಜಗಳನ್ನು ಬಳಸುವುದರಿಂದ ರೈತರಿಗೆ ಆಗುವ ಲಾಭಗಳನ್ನು ಹಾಗೂ ಈ ಬೆಳೆ ಬೆಳೆಯವುದರಿಂದ ತಗಲುವ ವೆಚ್ಚ ಹಾಗೂ ಇದರ ಇಳುವರಿ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುತ್ತಾ ಇಂಥ ಬೀಜದ ಬಗ್ಗೆ ನಿಮ್ಮೂರಿನ ರೈತ ಸಿದ್ದಪ್ಪ ಗಿಡ್ಡನ್ನವರ ಇವರು ಜಮೀನದಲ್ಲಿ ಬೆಳೆದ ಬೆಳೆ ನಿಮ್ಮ ಕಣ್ಣು ಮುಂದೆ ಇದೆ ಇದಕ್ಕಾಗಿ ರೈತ ಬಾಂಧವರು ಕಡಿಮೆ ಖರ್ಚನಲ್ಲಿ ಹೆಚ್ಚು ಲಾಭಗಳಿಸಲಿದ್ದಾರೆ ಎಂದರು.

ಖಾನಟ್ಟಿ. ಗ್ರಾಮದ ರಸಗೂಬ್ಬರ ಮಾರಾಟಗಾರ ಎಮ್ಎಸ್ತುಪ್ಪದ ಇವರು ಈ ಕಂಪನಿಯ ಬೀಜಗಳು ನಮ್ಮ ಮರಾಠ ಮಳಿಗೆಯಲ್ಲಿ ಲಭ್ಯವಿರುತ್ತವೆ ಮತ್ತು ಇತಂಹ ಬೆಳೆ ಬೆಳೆದು ರೈತರು ತಮ್ಮ ಜೀವನ ಉಜ್ವಲಗೂಳಿಸಿ ಎಂದು ರೈತರಿಗೆ ಹೊಳಯುತ್ತಾ  ಹಂಜಿ ಇವರು ರೈತರ ಬೆಳೆದ ಜಮೀನಗಳಿಗೆ ತೆರಳಿ ಪರೀಶಿಲನೆ ಮಾಡಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಾ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುತ್ತಾರೆ ಎಂದರು.

ಶರಣಕುಮಾರ ಪಾಟೀಲ, ರಾಜುಕೂಣ್ಣೋರ ಆಗಮಿಸಿ ರೈತಬಾಂಧವರ ಜೊತೆ ಸಮಾಲೋಚನೆ ನಡೆಸಿದರು. ಪ್ರಗತಿ ಪರರೈತ ತಾನಾಜಿ ಮಾದರ ವಿನೋದ ಬಡಿಗೇರ ಲಕ್ಷ್ಮಣ ಚಂದರಗಿ ಮಾಲೀಕ ಗಸ್ತಿ  ವಿನೂದ ಬಜಂತ್ರಿಖಾನಟ್ಟಿ ಮುನ್ಯಾಳ ಶಿವಾಪೂರ ಗ್ರಾಮದ ರೈತಬಾಂಧವರು ಮಾಹಿತಿಯನ್ನು ಪಡೆದರು. 

ಸುದ್ದಿ ಓದಿ