ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಆಚರಣೆ
ಮುಗಳಖೋಡ 11: ಪಟ್ಟಣದ ಶ್ರೀ ಚ ವಿ ವ ಸಂಘದ ಡಾ ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರಕಾಶ ಸಿ ಕಂಬಾರ ಅವರು ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ ಪಿ ಬಿ ಕೊರವಿ, ಆರ್ ಎಸ್ ಶೇಗುಣಸಿ, ಪ್ರದೀಪ ನಾಯಕ, ಬಿ ಎಸ್ ಸವಸುದ್ದಿ, ಎಚ್ ಎಂ ಕಂಕಣವಾಡಿ, ಆರ್ ಎಂ ಖೇತಗೌಡರ, ಎಚ್ ಈ ಯಲಿಗಾರ, ಸಂಗಣ್ಣ ತೇಲಿ, ಶ್ರೀಶೈಲ ಕುಲಿಗೋಡ, ಶ್ರೀಮಂತ ಆಳಂದ ಮುಂತಾದವರು ಹಾಜರಿದ್ದರು.