ಮಹಾಶಿವರಾತ್ರಿ: ಯಡೂರ ವೀರಭದ್ರನಿಗೆ ಅಪಾರ ಭಕ್ತರು
ಮಾಂಜರಿ 19: ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಶನಿವಾರ ಮಹಾಶಿವರಾತ್ರಿ ಅಂಗವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವೀರಭದ್ರನಿಗೆ ಅಭಿಷೇಕ ಮಾಡಿ ದರ್ಶನ ಪಡೆದು ಪಾವನರಾದರು.
ಇಂದು ನಸುಕಿನ ವೀರಭದ್ರನಿಗೆ ಜಾವದಲ್ಲಿ ಗಂಗಾಜಲದಿಂದ ಜಲಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಭಕ್ತರಿಂದ ವಿಶೇಷ ಅಭಿಷೇಕಗಳು ನಡೆದವು. ಸುತ್ತಮುತ್ತಲಿನಿಂದ ಆಗಮಿಸಿ ಭಕ್ತರು ಕೃಷ್ಣಾನದಿಯಲ್ಲಿ ಮಿಂದು ವೀರಭದ್ರನ ದರ್ಶನ ಪಡೆದರು. ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಕಾಡಸಿದ್ದೇಶ್ವರ ಮಠದ ವತಿಯಿಂದ ಏಕಾದಶಿಯ ಉಪಹಾರವನ್ನು ನೀಡಿದರು.
ಬೇಸಿಗೆ ಕಾಲದ ಪ್ರಥಮ ಘಟ್ಟವಾದ ಶಿವರಾತ್ರಿ ದಿನದಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಶಿವ ಶಿವ ಎನ್ನುತ್ತ ದರ್ಶನ ಪಡೆದು ಪಾವನರಾದರು. ಶಿವರಾತ್ರಿ ಉಪವಾಸಕ್ಕೆ ಬೇಕಾದ ಬಾಳೆಹಣ್ಣು, ಶಾಬುದಾನೆ, ಶೇಂಗಾ ಮತ್ತು ಖಜುರು ತುಟ್ಟಿಯಾಗಿದ್ದರೂ ಲೆಕ್ಕಿಸದೆ ಶಿವರಾತ್ರಿ ವಿಜೃಂಭನೆಯಿಂದ ಆಚರಿಸಿದರು.