ಬೈಲಹೊಂಗಲ

ಮಹರ್ಷಿ ವಾಲ್ಮೀಕಿ ಜಯಂತಿ: ಪೂರ್ವಭಾವಿ ಸಭೆ

ಮಹರ್ಷಿ ವಾಲ್ಮೀಕಿ ಜಯಂತಿ: ಪೂರ್ವಭಾವಿ ಸಭೆ

ಬೈಲಹೊಂಗಲ:  ಪಟ್ಟಣದ  ತಹಸೀಲ್ದಾರ ಸಭಾಭವನದಲ್ಲಿ   ತಹಸೀಲ್ದಾರ ಸಚ್ಚಿದಾನಂದ ಕುಚನೂರ ಅಧ್ಯಕ್ಷತೆಯಲ್ಲಿ  ಮಹರ್ಷಿ  ವಾಲ್ಮೀಕಿ ಜಯಂತಿ ಆಚರಿಸುವ  ಕುರಿತು ಗುರುವಾರ ಪೂರ್ವಭಾವಿ ಸಭೆ ಜರುಗಿತು.

       ಇದೇ ಅ.28ರಂದು   ಮಹರ್ಷಿ ವಾಲ್ಮೀಕಿ  ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಮಾಜದ ಬಾಂಧವರು ಸೇರಿದಂತೆ ಇತರರು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು. ಕಲೆ, ಜಾನಪದ ಸಂಸ್ಕೃತಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ವಾಲ್ಮೀಕಿ  ಜಯಂತಿಯಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ತಾಲೂಕಿನ ನಾನಾ ಸಂಘ ಸಂಸ್ಥೆಗಳು, ಸಮುದಾಯದ ಮುಖಂಡರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ , ಜಾನಪದ ಕಲಾತಂಡಗಳನ್ನು ಆಹ್ವಾನಿಸುವುದು, ಪಿ.ಯು.ಸಿ ಯಲ್ಲಿ ಅಧಿಕ ಅಂಕ ಪಡೆದವರಿಗೆ ಪ್ರೋತ್ಸಾಹ ಧನ, ಗಿರಿಜನ ಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ಹಾಗೆಯೇ ವಾಲ್ಮೀಕಿ  ಜಯಂತಿಯಂದು ಭಾಷಣ ಮಾಡಲು ವಿಶೇಷ ಆಹ್ವಾನಿತರ ಹೆಸರು ಸೂಚಿಸಬೇಕು. ಕಾರ್ಯಕ್ರಮಕ್ಕೆ ದೂರದಿಂದ ಆಗಮಿಸುವವರಿಗೆ ವಾಹನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ಅಚ್ಚುಕಟ್ಟು ವ್ಯವಸ್ಥೆಗೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.

    ಪುರಸಭೆ ಮುಖ್ಯಾಧಿಕಾರಿ ವಿರೇಶ  ಹಸಬಿ, ತಾಪಂ ಕಾರ್ಯನಿರ್ವಾ ಹಕ ಅಧಿಕಾರಿ ಸುಭಾಷ ಸಂಪಗಾವಿ, ಬಿಇಓ ಎ. ಎನ್. ಪ್ಯಾಟಿ, ಸಿ. ಬಿ. ಯಮನೂರ, ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್ಐ ಗುರುರಾಜ ಕಲಬುರ್ಗಿ, ಬಸವರಾಜ ದಳವಾಯಿ, ಮುಖಂಡ ನಿಂಗಪ್ಪ ಅರಕೇರಿ, ರಮೇಶ ರಾಯಪ್ಪಗೋಳ, ಸುರೇಶ ರಾಯಪ್ಪಗೋಳ, ರುದ್ರಪ್ಪ ನಿಂಗನ್ನವರ, ನಾಗಪ್ಪ ಬೈಲಪ್ಪಗೋಳ, ಶಂಕರ ಕೊರಿಕೋಪ್ಪ, ಮನೋಜ ಕೇಳಗೆರಿ, ಸಿದ್ದಪ್ಪ ಜಳಕದ, ಜಿ. ವಾಯ್. ಭರಮಣ್ಣವರ, ರಾಮಸಿದ್ದಪ್ಪ ಕಡಬಿ, ಹಣಮಂತ ದೊಡ್ಡನ್ನವರ, ಆನಂದ ಪಟಾತ, ಮಲ್ಲಿಕಾರ್ಜು ನ ಕಿತ್ತೂರ, ಕ. ಸಿ. ದೇಶನೂರ, ಎಸ ವಿ. ರೋಳ್ಳಿ, ಜೆ. ವಿ. ಅಣ್ಣಿಗೇರಿ, ವಿ. ಎಲ.್ ನ್ಯಾಮಗೌಡರ, ಎಲ್. ಆರ್. ಸದಲಗಿ, ಎಮ್. ಎಸ್. ಪಾಟೀಲ, ಪರಶುರಾಮ ಕಣಬೂರ, ಅಶೋಕ ಮಾನೆ,  ಎಲ್ಲಾ ಇಲಾಖೆಯ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ