ಮಹರ್ಷಿ ವಾಲ್ಮೀಕಿ ಪ.ಸ.ಸಂಘಕ್ಕೆ ರೂ 19 ಲಕ್ಷ ಲಾಭ
ಹೂವಿನಹಡಗಲಿ 18 : ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ. ಕಳೆದ ಆರ್ಥಿಕ ವರ್ಷ ದಲ್ಲಿ ರೂ. 22.803796 ಸಾಲ ವಿತರಿಸಿ ರೂ. 19.79160 ನಿವ್ವಳ ಲಾಭ ಗಳಿಸಿದೆ ಎಂದು ಅದ್ಯಕ್ಷ ಊಳಿಗದ ಹನುಮಂತಪ್ಪ ಹೇಳಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸೊಸೈಟಿಯ 7ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.’ಸದಸ್ಯರ ಸಹಕಾರ ಹಾಗೂ ಗ್ರಾಹಕರು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿರುವುದರಿಂದ ಸೊಸೈಟಿ ಪ್ರತಿವರ್ಷವೂ ಲಾಭ ಗಳಿಸುತ್ತಿದೆ. ಆರ್ಥಿಕ ಶಿಸ್ತು ಕಾಪಾಡುವ ದಿಸೆಯಲ್ಲಿ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸದಸ್ಯರು ಸೊಟೈಟಿಯಲ್ಲಿನ ಸಾಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.ಸಮಾಜದ ಮುಖಂಡರಾದ ಎಲ್.ಜಿ.ಹೊನ್ನಪ್ಪ ಮಾತನಾಡಿದರು. ಸಭೆಯಲ್ಲಿ ಉಪಾದ್ಯಕ್ಷ ಎಂ.ವಿ. ಗಂಗಾವತಿ. ನಿರ್ದೇಶಕ ರಾದ ಟಿ.ಮಹಾಂತೇಶ. ಲಕ್ಷ್ಮಣ. ಯು.ಹನುಮಂತಪ್ಪ. ಎನ್.ಕೋಟೆಪ್ಪ. ಜ.ದೇವೇಂದ್ರ ಪ್ಪ. ಕೆ.ವಿಶಾಲಕ್ಷಮ್ಮ. ದೀಪದ ಕೃಷ್ಣ. ಯು.ಮಲ್ಲಿಕಾರ್ಜುನ ಇದ್ದರು.ರಾಮಣ್ಣ ಪ್ರಾರ್ಥನೆ ನಂತರ ಜೆ.ಪರಸಪ್ಪ ಸ್ವಾಗತಿಸಿದರು.
ಇದೇ ವೇಳೆ 10ನೇತರಗತಿ.ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು ಜತೆಗೆ ರಾಷ್ಟ್ರ ಪದಕ ಪಡೆದ ಡಿವೈಎಸ್ ಪಿ ವೆಂಕಟಪ್ಪ ಹಾಗೂ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕ್ಕೆ ? 5ಲಕ್ಷ ರೂ.ದೇಣಿಗೆ ನೀಡಿದ ಸುಶೀಲಾ ಮ್ಮ ಅವರನ್ನು ಸನ್ಮಾನಿಸಲಾಯಿತು.