ಚಿಕ್ಕೋಡಿ

10ರಂದು ಮಹಾಲಕ್ಷ್ಮೀ ದೇವಿ ಜಾತ್ರೆ

10ರಂದು ಮಹಾಲಕ್ಷ್ಮೀ ದೇವಿ ಜಾತ್ರೆ

ಚಿಕ್ಕೋಡಿ 07: ಸಂಪ್ರದಾಯ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೆ ಫೆ 10 ರಿಂದ 14ರವರೆಗೆ ವಿಜ್ರಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

ಫೆ. 10 ರಂದು ಹಕ್ಕುದಾರರಿಂದ ಹಾಗೂ ಗ್ರಾಮಸ್ಥರಿಂದ ಲಕ್ಷ್ಮೀದೇವಿ ನೈವಿದ್ಯ, ಉಡಿ ತುಂಬುವುದು. ನಂತರ ಮೆರವಣಿಗೆ ಮತ್ತು ಮೂರ್ತಿಪ್ರತಿಷ್ಠಾಪನೆ ಮಾಡಲಾಗುತ್ತದೆ. ಫೆ 11 ರಂದು ದೇವಿಯ ಕೋಣಿನ ಮೆರವಣಿಗೆ ನಡೆಯಲಿದೆ. ರಾತ್ರಿ 10 ಗಂಟೆಗೆ ರೈತ ಹಚ್ಚಿದ ದೀಪ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. 

ಫೆ.12 ರಂದು ಹುಡುಗರ ಓಡುವ ಶರ್ಯತ್ತು, ಮಹಿಳೆಯರ ಸೈಕಲ್ ಶರ್ಯತ್ತು, ಪುರುಷರ ಸೈಕಲ್ ಶರ್ಯತ್ತು, ಓಡುವ ಕುದುರೆ ಶರ್ಯತ್ತು, ಜನರಲ್ ಕುದುರೆ ಗಾಡಿ ಶರ್ಯತ್ತು, ಹಲ್ಲು ಹಚ್ಚಿದ ಕುದುರೆ ಗಾಡಿ ಶರ್ಯತ್ತು, 1 ಎತ್ತು 1 ಕುದುರೆ ಗಾಡಿ ಶರ್ಯತ್ತು, ಜೋಡೆತ್ತಿನ ಗಾಡಿಯ ಶರ್ಯತ್ತು ಮತ್ತು ಸಂಜೆ 4 ಗಂಟೆಗೆ ಅಂತರಾಜ್ಯಮಟ್ಟದ ಭವ್ಯ ಜಂಗಿ ಕುಸ್ತಿಗಳು ನಡೆಯಲಿವೆ. ರಾತ್ರಿ 11 ಗಂಟೆಗೆ ಮಗ ಹೋದರೂ ಮಾಂಗಲ್ಯಬೇಕು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.  

ಫೆ,13 ರಂದು ಶ್ರೀ ಲಕ್ಷ್ಮೀದೇವಿಯ ನೈವದ್ಯ, ಸಾರ್ವಜನಿಕರಿಂದ ಉಡಿ ತುಂಬುವದು, ರಾತ್ರಿ ದೇವಿಯ ಮೂರ್ತಿಯ ವಿಸರ್ಜನೆ ನಡೆಯಲಿದೆ. ಫೆ,14 ರಂದು ಸೀಮಿ ಲಕ್ಷ್ಮೀದೇವಿಗೆ ನೈವೆದ್ಯ ಕೊಡುವುದು ಎಂದು ಜಾತ್ರಾ ಕಮೀಟಿ ತಿಳಿಸಿದೆ. 


ಸುದ್ದಿ ಓದಿ