ಅಥಣಿ

ಮದಭಾವಿ ಗ್ರಾಮ ಪಂಚಾಯತ ಅಧಿಕಾರದ ಚುಕ್ಕಾಣಿ ಬಿಜೆಪಿಗೆ

ಮದಭಾವಿ ಗ್ರಾಮ ಪಂಚಾಯತ ಅಧಿಕಾರದ ಚುಕ್ಕಾಣಿ ಬಿಜೆಪಿಗೆ

ಅಧ್ಯಕ್ಷರಾಗಿ ಮಹಾದೇವ ಕೋರೆ, ಉಪಾಧ್ಯಕ್ಷರಾಗಿ ಸುಶ್ಮೀತಾ ನೀಲಜಗಿ ಆಯ್ಕೆ

ಅಥಣಿ 28: ಮಾಜಿ ಸಚಿವ ಶ್ರೀಮಂತ ಪಾಟೀಲ ಮಾರ್ಗದರ್ಶನದಲ್ಲಿ ನಡೆದ ಮದಭಾವಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ 15 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹಾದೇವ ಕೋರೆ, 13 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಸುಶ್ಮೀತಾ ಮುರಿಗೆಪ್ಪ ನೀಲಜಗಿ ಆಯ್ಕೆಯಾದರು.   

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾರ್ಗದರ್ಶನದಲ್ಲಿ ಮದಭಾವಿ ಗ್ರಾಮ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆಯಾಗಲು ಮದಭಾವಿ ಹಾಗೂ ತೆವರಟ್ಟಿ ಗ್ರಾಮದ ಗ್ರಾಮ ಪಂಚಾಯತ ಸದಸ್ಯರ ಸಹಕಾರವೇ ಕಾರಣ ಎಂದರು.  

ನನ್ನ ಅಧ್ಯಕ್ಷ ಅವಧಿಯಲ್ಲಿ ಮದಭಾವಿ ಹಾಗೂ ತೆವರಟ್ಡಿ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮಾಡುವೆ ಜೊತೆಗೆ ಗ್ರಾಮಗಳಲ್ಲಿ ಸ್ವಛ್ಚತೆ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ ಅವರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಮತದಾರ ಸದಸ್ಯರನ್ನು ಅಭಿನಂದಿಸಿದರು.  

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಬಾಳು ಮಗದುಮ್ ಸಿದ್ಧಲಿಂಗ ಇಬ್ರಾಹಿಂಪುರ, ಸಂತೋಷ ಕಲೋತಿ, ಮಹೇಶ ಕೇಸ್ತಿ, ಶೋಭಾ ಸದಾಶಿವ ಕಾಂಬಳೆ,  ಚನ್ನಪ್ಪ ಐಹೊಳೆ,  ಗೋಪಾಲ ಅವಳೆ, , ದೀಲೀಪ ಪವಾರ ಸೇರಿದಂತೆ 19 ಸದಸ್ಯರು ಪಾಲ್ಗೊಂಡಿದ್ದರು.   ಈಶ್ವರ ಕುಂಬಾರೆ, ಆರ್‌.ಎಮ್‌.ಪಾಟೀಲ, ರಾಮು ಮಗದುಮ್, ರಾಜು ಮಾನೆ, ಅಪ್ಪಣ್ಣಾ ಮಗದುಮ್, ಶ್ರೀಶೈಲ ಮೇತ್ರೆ, ನಿತಿನ ಪಾಟೀಲ, ಮಹಾಂತೇಶ ಕಾಂಬಳೆ, ಮಾಯಪ್ಪ ಖಿಲಾರೆ, ಸಿದ್ದು ಪೂಜಾರಿ, ಹಣಮಂತ ತೊಡಕರ, ಪರಸು ಬಾಡಗಿ,  ಬಾಬು ನಿಲಜಗಿ, ಮುತ್ತಪ್ಪ ಮಗದುಮ್, ಮುರುಘೇಶ ಶ್ಯಾಮಣ್ಣವರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ ಎರೆಚಿ ವಿಜಯೋತ್ಸವ ಆಚರಿಸಿದರು.  

ನೂತನ ಅಧ್ಯಕ್ಷ ಮಹಾದೇವ ಕೋರೆ ಹಾಗೂ ಸುಶ್ಮೀತಾ ನೀಲಜಗಿ ಇವರನ್ನು ಮಾಜಿ ಸಚಿವ ಶ್ರೀಮಂತ ಪಾಟೀಲ ಅಭಿನಂದಿಸಿದರು.  

ಚುನಾವಣಾಧಿಕಾರಿಯಾಗಿ ದೀಪಕ ಕಾಂಬಳೆ, ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೇಮಲತಾ ಮಾಳಿ, ಕಾರ್ಯದರ್ಶಿ ಉಸ್ಮಾನ ಮುಲ್ಲಾ  ಕಾರ್ಯನಿರ್ವಹಿಸಿದರು. 


ಸುದ್ದಿ ಓದಿ