ಆಧ್ಯಾತ್ಮಿಕ ಜಾಗೃತಿಗೆ ಅವಿರತ ಶ್ರಮಿಸಿದ್ದಾರೆ ಮಾಧವಾನಂದ ಪ್ರಭುಜಿ: ವೈದ್ಯ
ಯರಗಟ್ಟಿ 04: ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಸದ್ಗುರು ಮಾಧವಾನಂದ ಪ್ರಭುಜಿ ಅವಿರತವಾಗಿ ಶ್ರಮಿಸಿದ್ದಾರೆಂದು ಶಾಸಕ ವಿಸ್ವಾಸ ವೈದ್ಯ ಹೇಳಿದರು.
ಸಮೀಪದ ಮಬನೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಧವಾನಂದರ 108ನೇ ಜಯಂತ್ಯುತ್ಸವ ಹಾಗೂ ಕರೆಪ್ಪ ಮಹಾರಾಜರ 5ನೇ ಪುಣ್ಯಸ್ಮರಣೋತ್ಸವ, ತೊಟ್ಟಿಲು ಪೂಜೆ, ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಸಮುದಾಯ ಅವರ ಆದರ್ಶಗಳನ್ನು ಎಲ್ಲರೂ ಆಚರಣೆ ತರುವಂತೆ ಹೇಳಿದರು. ಮಬನೂರ, ಮದ್ಲೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ಪಿಯು ಕಾಲೇಜು ತೆರೆಯಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನಡಿದರು.
ಸಾನ್ನಿದ್ಯ ವಹಿಸಿದ್ದ ಇಂಚಗೇರಿಮಠದ ಶ್ರೀ ಫ್ರಭುಜಿ ಮಹಾರಾಜರು ಮಾತನಾಡಿ, ಬಸವಾದಿ ಶರಣರು ಹಾಕಿಕೊಟ್ಟ ಅಮಾನತೆ ತಳಹದಿ ಮೇಲೆ ವಿಶ್ವಶಾಂತಿ ಕುರಿತು ಚಿಂತಿಸಿದವರಲ್ಲಿ ಇಂಚಗೇರಿ ಸಂಪ್ರದಾಯದ ಸದ್ಗುರು ಶ್ರೀ ಮಾದವಾನಂದ ಪ್ರಭುಜಿ ಅವರೂ ಒಬ್ಬರಾಗಿದ್ದಾರೆ. ಇವರ ಸಂದೇಶ ಜಗಕ್ಕೆ ಸಾರಿದ ದಿ.ಕರೆಪ್ಪ ಮುರಗೋಡ ಮಹಾರಾಜರ ಕಾರ್ಯ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಗ್ರಾಪಂ ಸದಸ್ಯ ಪಡೆಪ್ಪ ನರಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಕರೆಪ್ಪ ಮುರಗೋಡ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ನಿಂಗವ್ವ ಮೇಟಿ, ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ರವೀಂದ್ರ ಯಲಿಗಾರ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಸವದತ್ತಿ ತಹಸೀಲ್ದಾರ ಎಂ.ಎನ್.ಹೆಗ್ಗನ್ನವರ, ಬೈಲಹೊಂಗಲ ಕಾಂಗ್ರೇಸ ಮುಖಂಢ ಕಿರಣ ಸಾಧುನವರ, ಜಿಪಂ ಮಾಜಿ ಸದಸ್ಯ ಫಕೀರ್ಪ ಹದ್ದನ್ನವರ, ಡಿ.ಡಿ.ಟೋಪೋಜಿ, ಬಸವರಾಜ ಬಸಲಗುಂದಿ, ಸಿ.ಬಿ.ಬಾಳಿ, ರಾಮಚಂದ್ರ ಪಟಾತ, ಯಲ್ಲಪ್ಪ ನರಿ, ಸಿದ್ಧಾರೂಢ ಬಿಲಕಂಚಿ, ಹನಮಂತ ಸಿಂಗನವರ, ಶಿವಪ್ಪ ಅಗಸಿಮನಿ, ದ್ಯಾಮಪ್ಪ ಮುರಗೋಡ, ಮಹಾದೇವ ಮುರಗೋಡ, ಫಕೀರ್ಪ ಹಟ್ಟಿ, ಪ್ರಕಾಶ ನರಿ ಸೇರಿದಂತೆ ಇತರರು ಇದ್ದರು.