ಎಮ್.ವಿ. ಕಾಂಬಳೆ ಜೆಡಿಎಸ್ ಪಕ್ಷ ಸೇರ್ಪಡೆ
ಇಂಡಿ: ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಮ್.ವಿ. ಕಾಂಬಳೆ ಅವರು ತಮ್ಮ ಬೆಂಬಲಿಗರೊಂದಿಗೆ ಗುರುವಾರರಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಸಮ್ಮುಖದಲ್ಲಿ ಇಂಡಿ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ, ಅಯೂಬ ನಾಟೀಕಾರ, ಮರೆಪ್ಪ ಗಿರಣಿವಡ್ಡರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಪೀರ್ಪ ಹೊಟಗಾರ, ವಸಂತ ಚೌವ್ಹಾಣ್ ಸೇರಿದಂತೆ ಅನೇಕ ಮಹಿಳಾ ಕಾರ್ಯಕರ್ತಯರು ಉಪಸ್ಥಿತರಿದ್ದರು.