ಎಂ.ಪಿ.ಸುಮ ವಿಜಯ,ಬೆಂಬಲಿಗರು ಬಿಜೆಪಿ ಸೇರೆ್ಡ
ಹೂವಿನಹಡಗಲಿ 24: ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಪುತ್ರಿ ಎಂ.ಪಿ.ಸುಮಾ ವಿಜಯ ಅಧಿಕೃತವಾಗಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ನಳೀನಾಕುಮಾರ ಕಟೇಲ್ ,ಕೇಂದ್ರದ ಮಂತ್ರಿ ಶೋಭಾ ಕರಂದ್ಲಾಜೆ,ಉಸ್ತುವಾರಿ ಅಣ್ಣಾಮಲೈ,ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರೆ್ಡಯಾದರು.
ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷರು,ಸಚಿವರ ಸಮ್ಮುಖದಲ್ಲಿ ಎಂ.ಪಿ.ಸುಮಾ ವಿಜಯ ಮತ್ತು ಬೆಂಬಲಿಗರಾದ ಪುರಸಭೆ ಮಾಜಿ ಅಧ್ಯಕ್ಷರಾದ ಹಣ್ಣಿ ವೀರಮ್ಮ,ಪವಿತ್ರಾ ರಾಮಸ್ವಾಮಿ, ಕೋಡಿಹಳ್ಳಿ ಕೊಟ್ರೇಶ, ಮಾಜಿ ಸದಸ್ಯರಾದ ರಾಮಸ್ವಾಮಿ ಚೈತನ್ಯ, ಎಸ್.ಯಮನೂರ್ಪ, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತ,ಬಿ.ಎಂ.ಅಭಿಷೇಕ, ಯಮನಪ್ಪ, ಸುರೇಶ ಕಾಯಣ್ನನವರ, ಕಿರಣ ಕುಮಾರ,ಎಂ.ಪಿ.ಅರುಣ್, ಗೀತಾ ದೇಸಾಯಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರೆ್ಡಯಾದರು. ಇದೇ ವೇಳೆ ಬಿಜೆಪಿ ಹಡಗಲಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ಬಸವರಾಜ, ಸಂತೋಷ ಜೈನ್ ಇದ್ದರು.