ಕಾರವಾರ

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನ ಆಕ್ಸಿಜನ್ ಸಂಗ್ರಹಗಾರಕ್ಕೆ ಶಾಸಕರ ಭೇಟಿ

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನ ಆಕ್ಸಿಜನ್ ಸಂಗ್ರಹಗಾರಕ್ಕೆ ಶಾಸಕರ ಭೇಟಿ

ಕಾರವಾರ 22: ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಆಕ್ಸಿಜನ್ ಸಂಗ್ರಹಗಾರಕ್ಕೆ ಮೊದಲ ಬಾರಿಗೆ 6 ಕೆಎಲ್ ಆಕ್ಸಿಜನ್ ಭರ್ತಿ ಮಾಡುತ್ತಿರುವುದನ್ನು ಶಾಸಕಿ  ರೂಪಾಲಿ ಎಸ್‌. ನಾಯ್ಕ  ಪರೀಶೀಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನವಿಗೆ ಸ್ಪಂದಿಸಿದ ಮುಸ್ಲಿಂ ರಾಷ್ಟ್ರ ಸೌದಿ  ಬಹರೇನ್‌ನಿಂದ ಭಾರತಕ್ಕೆ ನೀಡಿದ ಆಕ್ಸಿಜನ್ ಲಿಕ್ವಿಡ್‌ನ್ನು ಜಿಲ್ಲೆಗೆ ಪೂರೈಸಲಾಗಿದ್ದು, ಅದನ್ನು ಕಾರವಾರ ಮೆಡಿಕಲ್ ಕಾಲೇಜು ಆಕ್ಸಿಜನ್ ಸಂಗ್ರಹಗಾರಕ್ಕೆ ತುಂಬಲಾಯಿತು. ಕಾರವಾರದಲ್ಲಿ   ಮುಂದಿನ ದಿನದಲ್ಲಿ  ಆಕ್ಸಿಜನ್ ಕೊರತೆಯಾಗುವುದಿಲ್ಲ ಎಂದು ಶಾಸಕರು  ಭರವಸೆ ವ್ಯಕ್ತಪಡಿಸಿದರು. ಸರ್ಕಾರದಿಂದ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕದ ಕಾಮಗಾರಿ ಸ್ಥಳವನ್ನು ಸಹ ಅವರು ವೀಕ್ಷಿಸಿದರು.  ಬಳಿಕ ಕೋವಿಡ್ ವಾರ್ಡ್‌ಗಳಿಗೆ ಪೂರೈಕೆ ಮಾಡಲಾಗುತ್ತಿರುವ ಆಕ್ಸಿಜನ್ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು. 

ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರದಲ್ಲಿ ಚಾಲನೆ:  

ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ   ಆಸ್ಪತ್ರೆಯ ಕಟ್ಟಡ ನಿರ್ಮಾಣ ಸ್ಥಳವನ್ನು  ಸೊಮವಾರ ಸಂಜೆ ಶಾಸಕಿ ವೀಕ್ಷಿಸಿದರು. 450 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ಸಿಗಲಿದೆ. ಮುಂದಿನ ದಿನದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮೇಡಿಕಲ್ ಕಾಲೇಜಿನ ನಿರ್ದೇಶಕರು,  ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ