ಸೌಂದತ್ತಿ

ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಶಾಸಕ ವಿಶ್ವಾಸ ವೈದ್ಯ

ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಶಾಸಕ ವಿಶ್ವಾಸ ವೈದ್ಯ

ಅಂಧರ ಬಾಳಿಗೆ ಬೆಳಕನ್ನು ನೀಡುವ ನಿಟ್ಟಿನಲ್ಲಿ ಉಚಿತವಾಗಿ 605 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ  

ಸವದತ್ತಿ 12: ಶಾಸಕ ವಿಶ್ವಾಸ ವೈದ್ಯರವರು ತಮ್ಮ 42ನೇ ಹುಟ್ಟು ಹಬ್ಬವನ್ನು ಅಂಧರ ಬಾಳಿಗೆ ಬೆಳಕನ್ನು ನೀಡುವ ನಿಟ್ಟಿನಲ್ಲಿ ಉಚಿತವಾಗಿ 605 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಯನ್ನು ಮಾಡಿಸುವ ಮೂಲಕ ಅಭಿಮಾನಿಗಳೊಂದಿಗೆ ವಿಶಿಷ್ಟವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. 

ಗುರುವಾರದಂದು ಬೆಳಿಗ್ಗೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಶಾಸಕರ ನಿವಾಸಕ್ಕೆ ತೆರಳಿ ತಮ್ಮ ನಾಯಕನಿಗೆ 42ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು. 

ಹಿರಿಯರು ಕಿರಿಯರೆನ್ನದೆ ಮತಕ್ಷೇತ್ರದಾದ್ಯಂತ ಅಪಾರ ಪ್ರಮಾಣದಲ್ಲಿ ಜನಸಂಪರ್ಕವನ್ನು ಹೊಂದಿರುವ ಯುವ ಶಾಸಕ ವಿಶ್ವಾಸ ವೈದ್ಯರವರಿಗೆ ಅಭಿಮಾನಿಗಳು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಮ್ಮದೆ ಆದಂತ ವೈಶಿಷ್ಠ್ಯತೆಯಿಂದ ವಿಶೇಷವಾಗಿ ಆಚರಣೆ ಮಾಡಿ ಶುಭಾಶಯ ಕೋರಿ ಶಾಸಕರಿಗೆ ಶುಭ ಹಾರೈಸಿದರು. 

ಶಾಸಕ ವಿಶ್ವಾಸ ವೈದ್ಯರ ಅಭಿಮಾನಿ ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ ಶಾಮರಾಯನವರ ಅವರು ಅಭಿಮಾನದಿಂದ ತಮ್ಮ ವಾರ್ಡಿನ ಜನರೊಂದಿಗೆ ವಿವಿಧ ವಾದ್ಯ ಮೇಳ, ಕುಂಭಮೇಳ ಹಾಗೂ ಗಜರಾಜನ ಮೆರವಣಿಗೆಯೊಂದಿಗೆ ಶಾಸಕ ವಿಶ್ವಾಸ ವೈದ್ಯರವರ ನಿವಾಸಕ್ಕೆ ತೆರಳಿ ಆನೆಯಿಂದ ಶಾಸಕರಿಗೆ ಹೂ ಮಾಲೆ ಹಾಕಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ನಂತರ 40 ಕೆಜಿ ತೂಕದ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚುವ ಮೂಲಕ ಶಾಸಕರಿಗೆ ಶುಭಾಶಯ ಕೋರಿದರು. 

ಪ್ರಕಾಶ ಲಮಾಣಿಯವರ ನೇತೃತ್ವದಲ್ಲಿ ಯಲ್ಲಮ್ಮಾ ತಾಂಡೆಯ ಅಭಿಮಾನಿಗಳು ಲಂಬಾಣಿ ಸಮವಸ್ತ್ರದಲ್ಲಿ ಆಗಮಿಸಿ ಬಾಂಜಾರ ನೃತ್ಯದೊಂದಿಗೆ ಸಂಭ್ರಮಿಸಿ ಶಾಸಕರಿಗೆ ಅಭಿಮಾನದ ಶುಭಾಶಯ ಕೋರಿದರು. 

ಡಾ.ಅಭಿನವಕುಮಾರ ಸ್ವಾಮೀಜಿ, ಹೊಸಮಠದ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಶಾಸಕ ವಿಶ್ವಾಸ ವೈದ್ಯರವರಿಗೆ ಆಶೀರ್ವದಿಸಿದರು. 

ವೈದ್ಯ ಪೌಂಡೇಶನವತಿಯಿಂದ ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಬಾಲ ಮಂದಿರದ ಮಕ್ಕಳಿಗೆ ವಿಶೇಷ ಉಡಗೊರೆಯನ್ನು ನೀಡಲಾಯಿತು. 

ರಾಜಶೇಖರ ಕಾರದಗಿ, ದೀಪಕ ಜಾನ್ವೇಕರ, ಮಲ್ಲಿಕಾರ್ಜುನ ಪುರದಗುಡಿ, ಚಂದ್ರಣ್ಣ ಶಾಮರಾಯನವರ, ಉದ್ಯಮಿ ಲಕ್ಷ್ಮಣ ಕಮತೆ, ಅಂಬರೀಶ ಯಲಿಗಾರ, ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ಶ್ರೀನಾಥ ಬೈರುಗೋಳ, ಶಿವನಗೌಡ ಪಾಟೀಲ, ಸುಭಾಸ ರಜಪುತ, ಸನ್ನಿ ನರಗೋಳ, ಸೋಮನಗೌಡ ಪಾಟೀಲ, ಫಕ್ಕೀರ​‍್ಪ ಹದ್ದನ್ನವರ, ಡಾ.ಸಿ.ಬಿ.ನಾವದಗಿ, ವೀರೇಶ ಬ್ಯಾಹಟ್ಟಿ, ಅಲ್ಲಮಪ್ರಭು ಪ್ರಭುನವರ, ಜಗದೀಶ ಹಳಮನಿ,  ನಿವೃತ್ತ ಸೈನಿಕರ ಸಂಘದ ಸದಸ್ಯರು, ವಿವಿಧ ಸಮಾಜ ಬಾಂಧವರು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಾಸಕರ 42ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದರು. 


ಸುದ್ದಿ ಓದಿ