ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಶಂಕುಸ್ಥಾಪನೆ
ಬ್ಯಾಡಗಿ25: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಜುಲೈ 8ರಂದು ನೀಡುವ ತೀರ್ಿಗೆ ಸಾರ್ವಜನಿಕರೆಲ್ಲರೂ ಬದ್ಧರಾಗುವ ಮೂಲಕ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಗೆ ಕೈಜೋಡಿಸಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 12.30 ಕೋಟಿ ರೂಗಳ ಅನುದಾನದಡಿ ಕೈಗೆತ್ತಿಕೊಂಡಿರುವ ಬ್ಯಾಡಗಿ-ರಟ್ಟೀಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಬಹುವರ್ಷಗಳ ಕನಸು ಸದ್ಯದಲ್ಲಿಯೇ ಸಾಕಾರಗೊಳ್ಳಲಿದ್ದು, ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳುವುದು ಖಚಿತ ಎಂದರಲ್ಲದೇ, ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಎಸ್’ಟಿಪಿ ಹಾಗೂ ಅಪೆಂಡಿಕ್ಸ್ ಯೋಜನೆಯಡಿ ಈಗಾಗಲೇ 66ಕೋಟಿ ರೂಗಳ ಮಂಜೂರಾತಿ ದೊರಕಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣವನ್ನು ಮಾಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ ವಹಿಸಿದ್ದರು. ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ವಿನಾಯಕ ಹಿರೇಮಠ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಫಕ್ಕೀರಮ್ಮ ಚಲುವಾದಿ, ಹನುಮಂತಪ್ಪ ಮ್ಯಾಗೇರಿ, ಸುಭಾಸ ಮಾಳಗಿ, ತಾಬಿಜೆಪಿ ಅಧ್ಯಕ್ಷ ಹಾಲೇಶ ಜಾಧವ, ಶೇಖರಗೌಡ ಗೌಡ್ರ, ಎಇಇ ಉಮೇಶ ನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರ, ಎಇ ಕೆ.ರಾಜಪ್ಪ, ಗುತ್ತಿಗೆದಾರ ಸಂತೋಷ ಹಿರೇಮಠ, ಮುಖಂಡರಾದ ಸುರೇಶ ಉದ್ಯೋಗಣ್ಣನವರ, ವೀರೇಂದ್ರ ಶೆಟ್ಟರ, ರಾಮಣ್ಣ ಉಕ್ಕುಂದ, ಈರಣ್ಣ ಚೌಟಿ, ಸಿ. ಆರ್. ಆಲದಗೇರಿ, ಸುರೇಶ ಆಸಾದಿ, ನಾಗೇಂದ್ರ್ಪ ಹರಿಜನ, ಸಂಜೀವ ಮಡಿವಾಳರ, ಬಸವರಾಜ ಹಾವನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.