ಯರಗಟ್ಟಿ

18.30 ಲಕ್ಷದ ನರೇಗಾ ಕಾಮಗಾರಿಗಳಿಗೆ ಶಾಸಕ ವೈದ್ಯ ಭೂಮಿಪೂಜೆ

18.30 ಲಕ್ಷದ ನರೇಗಾ ಕಾಮಗಾರಿಗಳಿಗೆ ಶಾಸಕ ವೈದ್ಯ ಭೂಮಿಪೂಜೆ

ಯರಗಟ್ಟಿ 27: ಸಮೀಪದ ಜೀವಾಪೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಚರಂಡಿ ಹಾಗೂ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಟದ ಮೈದಾನಕ್ಕೆ ಪೇವರ್ಸ, ಮತ್ತು ಹೈಟೆಕ್ ಶೌಚಾಲಯ ಸೇರಿದಂತೆ ಒಟ್ಟು 18.30 ಲಕ್ಷದ ನರೇಗಾ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕೆಂದು ಹೇಳಿದರು. 

ನಮ್ಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಬರುವ ದಿನಗಳಲ್ಲಿ ಜೀವಾಪೂರ ಗ್ರಾಮದವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ನಂತರ ಮಾತನಾಡಿದ ತಾ. ಪಂ. ಇಓ ಯಶವಂತಕುಮಾರ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತ ಮಟ್ಟದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶ ಈ ಯೋಜನೆ ಜಾರಿಗೆ ಬಂದಿದೆ ಎಂದು ಹೇಳಿದರು. 

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಕೂಲಿ ಕಾರ್ಮಿಕರು ಕೆಲಸ ಮಾಡಬೇಕು ಮತ್ತು ಗ್ರಾಮ ಪಂಚಾಯಿತ ಸದಸ್ಯರು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಎರಡು ತಿಂಗಳಲ್ಲಿ  ಸಮಯಕ್ಕೆ ಸರಿಯಾಗಿ ಕಾಮಗಾರಿಗಳನ್ನು ಆಗುವಂತೆ ನೋಡಿಕೊಳ್ಳಬೇಕು ಎಂದರು. 

 ವೇಳೆ ನೂತನವಾಗಿ ಸವದತ್ತಿ ವಿಧಾನಸಭಾ ಕ್ಷೇತ್ರ ಶಾಸಕರಾಗಿ ಆಯ್ಕೆಯಾಗಿ ಗ್ರಾಮಕ್ಕೆ ಆಗಮಿಸಿದ ಶಾಸಕ ವಿಶ್ವಾಸ ವೈದ್ಯ ಹಾಗೂ ನೂತನ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಉಪಾಧ್ಯಕ್ಷ ಬಸವರಾಜ ಆರಿಬೆಂಚಿ ಇವರಿಗೆ ಗ್ರಾಮಸ್ಥರ ವತಿಯಿಂದ ಸನ್ಮಾನ್ಯ ಕಾರ್ಯಕ್ರಮ ಜರುಗಿತು. 

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಕವಿತಾ ಬಾಲರಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಅರಳಿಕಟ್ಟಿ, ಜಿ. ಪಂ. ಎಇಇ ಎಚ್‌. ಎ. ಕದ್ರಾಪೂರಕರ, ಪಿಡಿಓ ಎಚ್‌. ಕೆ. ಚೌರಡ್ಡಿ, ಸಿಆರ್‌ಪಿ ಜಿ. ಎಸ್‌. ಮಲ್ಲಕನ್ನವರ, ರಾಮಚಂದ್ರ ಯರಡ್ಡಿ, ಯಂಕಪ್ಪ ಕಮಕೇರಿ, ಯಂಕಣ್ಣಾ ಯರಡ್ಡಿ, ಮುತ್ತನಗೌಡ ನಾಯ್ಕರ, ಸಂಗಯ್ಯ ಹಿರೇಮಠ, ಶಂಕರ ಇಟ್ನಾಳ, ಬಸನಗೌಡ ಪಾಟೀಲ,ಮ ಎಪಿಎಂಸಿ ಸದಸ್ಯೆ ರೇಖಾ ಯರಡ್ಡಿ, ಮಲ್ಲಪ್ಪ ನಾಯ್ಕರ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ಶಾಲಾ ಮುಖ್ಯೋಪಾಧ್ಯಾಯರಾದ ವಿ. ಎಂ. ಮರಡಿ, ಶಿಕ್ಷಕರಾದ ಶ್ರೀಕಾಂತ ಯರಡ್ಡಿ ಸೇರಿದಂತೆ ಗ್ರಾಮಸ್ಥರು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.   



ಸುದ್ದಿ ಓದಿ