ಶಾಸಕ ವೈದ್ಯ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ
ಯರಗಟ್ಟಿ 14: ಸವದತ್ತಿ ಯಲ್ಲಮ್ಮ ಮತ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರ 42ನೇ ಹುಟ್ಟುಹಬ್ಬದ ಪ್ರಯುಕ್ತ ಎಪಿಎಮ್ಸಿ ಅಧ್ಯಕ್ಷ ನೀಲಕಂಠ ಸಿದಬಸನ್ನವರ ಮಾತನಾಡಿ, ವಿಶ್ವಾಸ ವೈದ್ಯ ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದು, ದಿನ ನಿತ್ಯ ಜನಸೇವೆ ಬಯಸುವ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಗುರುವಾರ ಯರಗಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ವಿತರಿಸಿದರು. ಪಟ್ಟಣದ ಎಪಿಎಮ್ಸಿ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರು ಹಾಕಿ ಚಾಲನೆ ನೀಡಿದರು.
ಎಪಿಎಮ್ಸಿ ಉಪಾಧ್ಯಕ್ಷ ಬಸವರಾಜ ಅರೆಬೆಂಚಿ, ಕಡಬಿ ಗ್ರಾಪಂ ಅಧ್ಯಕ್ಷ ಪ್ರಕಾಶ ಸುಣದೋಳಿ, ಅದೃಶ ಶೀಲವಂತರ, ನೀಖಿಲ ಪಾಟೀಲ, ಪ್ರಕಾಶ ವಾಲಿ, ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ಮಡಿವಾಳ ಕುಂಟಿರ್ಪಗೋಳ, ಅಶೋಕ ಗಡನ್ನವರ, ವಿಠ್ಠಲ ಚಂದರಗಿ ಸಿದ್ದಾರೂಡ ಬಿಲಕಂಚಿ, ಡಿ.ಕೆ.ರಫೀಕ ಸೇರಿದಂತೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇದ್ದರು.
ಕಾರ್ಯಕರ್ತರು ವಿಶ್ವಾಸ ವೈದ್ಯ ಅವರ ಮನೆಗೆ ತೆರಳಿ ಹೂಗುಚ್ಛ ನೀಡಿ ಸನ್ಮಾನಿಸಿ ಹಾರೈಸಿದರು.
ಹೇಳಿಕೆ: ಶಾಸಕ ವಿಶ್ವಾಸ ವೈದ್ಯ , ಹುಟ್ಟು ಹಬ್ಬದ ದಿನದಂದು ಹಾರೈಸಿ ಪ್ರೋತ್ಸಾಹಿಸಿದ ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು. ಎಲ್ಲರೂ ವಿಶ್ವಾಸವಿಟ್ಟು ನನ್ನನ್ನು ಹರಿಸಿದ್ದೀರಿ. ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿತ ನಾನು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗಾಗಿ ನಿರಂತರ ಕೆಲಸ ಮಾಡುತ್ತೇನೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದರು.