ತಾಳಿಕೋಟಿ

ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಶಾಸಕ ಸೋಮನಗೌಡರ ಸಂಕಲ್ಪ

ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಶಾಸಕ ಸೋಮನಗೌಡರ ಸಂಕಲ್ಪ


ತಾಳಿಕೋಟಿ06:  ದೇವರ. ಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ 113 ಗ್ರಾಮಗಳ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವದು ಶಾಸಕ ಸೋಮನಗೌಡ ಪಾಟೀಲ ಇವರ ಸಂಕಲ್ಪವಾಗಿದೆ, ಎಂದು ಮುಖಂಡ ಸಾಹೇಬಗೌಡ ಪಾಟೀಲ(ಸಾಸನೂರ) ಹೇಳಿದರು. 

ಮತಕ್ಷೇತ್ರದ ಸಾತಿಹಾಳ, ಮಾರ್ಕಬ್ಬಿನಹಳ್ಳಿ ಹಾಗೂ ವಡವಡಗಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಬಾಗೇವಾಡಿ ವತಿಯಿಂದ 2021-22ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಸಾತಿಹಾಳ ಗ್ರಾಮದಲ್ಲಿ ರೂ. 122.00ಲಕ್ಷ, ಮಾರ್ಕಬ್ಬಿನಹಳ್ಳಿಯಲ್ಲಿ ರೂ. 82ಲಕ್ಷ, ಹಾಗೂ ವಡವಡಗಿಯಲ್ಲಿ ರೂ. 183.5ಲಕ್ಷ ವೆಚ್ಚದ ನಳ ಜೋಡಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯನ್ನು ಅನುಷ್ಠಾನಗೋಳಿಸಲು ಶಾಸಕ ಸೋಮನಗೌಡರು ಕಾರ್ಯೋನ್ಮಖರಾಗಿದ್ದು ಇಗಾಗಲೇ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಬೆಸಿಗೆ ಕಾಲದಲ್ಲಿ ಗ್ರಾಮೀಣ ಭಾಗದ ಜನರಿಗೆ ಯಾವ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಯಾಗಬಾರದೆಂಬುದು ಅವರ ನೈಜ ಕಳಕಳಿಯಾಗಿದೆ, ಇಂದು ನಾನು ಅವರ ಪ್ರತಿನಿಧಿಯಾಗಿ ಮೂರು ಗ್ರಾಮಗಳಲ್ಲಿ ಭೂಮಿ ಪೂಜೆ ನೆರವೇರಿಸಿದ್ದೇನೆ ಎಂದರು. 

ಮುಖಂಡರಾದ ಸಂಗನಗೌಡ ಧನ್ನೂರ, ರಾಮನಗೌಡ ನಾವದಗಿ, ಮಂಜುನಾಥಗೌಡ ವಡವಡಗಿ, ಶರಣಗೌಡ ಕೋಳೂರ, ಮಾಜಿ ತಾ ಪಂ ಸದಸ್ಯ ಮಲ್ಲು ತಳವಾರ, ಬಿ. ಕೆ. ಪಾಟೀಲ(ಸಾತಿಹಾಳ), ಎಂ. ಬಿ. ಬಿರಾದಾರ, ಗ್ರಾ. ಪಂ. ಸದಸ್ಯರಾದ ಧರ್ಮಣ್ಣ ಕರ್ನಾಲ, ಪರಶುರಾಮ ಪವಾರ, ಮಾಂತೇಶ ನಾಗರಬೆಟ್ಟ, ಉಪಾಧ್ಯಕ್ಷ ಪರಶುರಾಮ ಚೌಹಾಣ, ಅಬ್ದುಲ ಬಳಗಾನೂರ, ವಡವಡಗಿ ಪಿಡಿಒ ಎಸ್‌. ಆರ್‌. ತೋಳನೂರ, ಸಾತಿಹಾಳ ಪಿಡಿಒ ಗೊಲ್ಲಾಳೇಪ್ಪ ಕನ್ನೋಳ್ಳಿ, ಗುತ್ತಿಗೆದಾರರಾದ ಎಸ್‌. ಸಿ. ಕರ್ನಾಳ, ಸೋಮನಗೌಡ ಪಾಟೀಲ, ಎಇಇ ಎಸ್‌. ಬಿ. ಪಾಟೀಲ, ಗ್ರಂಥಪಾಲಕ ಎಸ್‌. ಜಿ. ಛಾಯಾಗೋಳ, ಎಲ್ಲು ಬಾವೂರ(ಸಾತಿಹಾಳ), ಇದ್ದರು. 


ಸುದ್ದಿ ಓದಿ