ಅಭಿವೃದ್ಧಿಗೆ ಸಹಕರಿಸಲು ಶಾಸಕ ಸೋಮನಗೌಡ ಮನವಿ
ತಾಳಿಕೋಟಿ21: ದೇ.ಹಿಪ್ಪರಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಕರ್ಾರದಿಂದ ಸಾವಿರ ಕೋಟಿ ಅನುದಾನ ತಂದಿದ್ದೇನೆ, ಈಗಾಗಲೆ ಹಲವಾರು ಕಾಮಗಾರಿಗಳು ಕ್ಷೇತ್ರದಲ್ಲಿ ಪ್ರಗತಿ ಹಂತದಲ್ಲಿವೆ ನಿಮ್ಮೆಲ್ಲರ ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಮತಕ್ಷೇತ್ರದ ವಡವಡಗಿ ಹಾಗೂ ಗುಳಬಾಳ ಗ್ರಾಮಗಳಲ್ಲಿ ಸನ್ 2019-20ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮದಡಿ ಸುಮಾರು 1.50 ಕೋಟಿ ಮೋತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನನ್ನ ಮತಕ್ಷೇತ್ರದ ಸುಮಾರು 120 ಗ್ರಾಮಗಳನ್ನೋಳಗೊಂಡ ಜಿಲ್ಲೆಯ ಅತಿ ದೊಡ್ಡ ಮತಕ್ಷೇತ್ರವಾಗಿರುವುದರಿಂದ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಹಂತ ಹಂತವಾಗಿ ಈ ಎಲ್ಲ ಸಮಸ್ಯಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಈ ಭಾಗದ ಅತಿ ಅಗತ್ಯವಾದ 110/ಕೆ.ವಿ. ವಿದ್ಯುತ್ ಘಟಕ ಮಂಜುರಾತಿ ಕಾರ್ಯ ಪ್ರಗತಿಯಲ್ಲಿದೆ. ಕ್ಷೇತ್ರದ ಹಲವಾರು ಗ್ರಾಮಗಳ ದೇವಸ್ಥಾನ ಹಾಗೂ ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ನಾನು ನಿಮ್ಮೆಲ್ಲರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಎಂದರು.
ಈ ಸಂದರ್ಭದಲ್ಲಿ ಬೃಂಗೇಶ್ವರಲಿಂಗ ಸ್ವಾಮೀಜಿ, ಮುಖಂಡರಾದ ಸಂಗನಗೌಡ ಧನ್ನೂರ, ಬಸಲಿಂಗಪ್ಪಗೌಡ ಇಂಗಳಗಿ, ಮಂಜುನಾಥಗೌಡ ಹೊಸಗೌಡರ, ಶಂಕರಗೌಡ ನರಸಲಗಿ, ರಾಮನಗೌಡ ಬಿರಾದಾರ(ಬ್ಯಾಕೋಡ), ಗ್ರಾಪಂ. ಅಧ್ಯಕ್ಷೆ ಶಿವಮ್ಮ ಮಾಸ್ತಿ, ಉಪಾಧ್ಯಕ್ಷೆ ಗಂಗಮ್ಮ ನರಸಲಗಿ, ತಾಪಂ ಮಾಜಿ ಸದಸ್ಯ ಮಲ್ಲು ತಳವಾರ, ಶರಣಗೌಡ ನಾಡಗೌಡ, ಈರಣ್ಣ ಯಲಗೋಡ, ದಯಾನಂದ ತಳವಾರ, ಆರ್ ಕೆ ನಾಯಕ, ಶ್ರೀಶೈಲ ಸಾಸನೂರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಭಾರತಿ ಚಲುವಯ್ಯ, ಎಇಇ ಆನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು