ತಾಳಿಕೋಟಿ

ಶಾಸಕ ಸೋಮನಗೌಡ ಪಾಟೀಲರಿಗೆ ಸನ್ಮಾನ

ಶಾಸಕ ಸೋಮನಗೌಡ ಪಾಟೀಲರಿಗೆ ಸನ್ಮಾನ

ತಾಳಿಕೋಟಿ: ತಾಲೂಕಿನ ಭಂಟನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ವತಿಯಿಂದ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಸನ್ಮಾನ ಸೀಕರಿಸಿ ಮಾತನಾಡಿದ ಶಾಸಕ ಸೋಮನಗೌಡರು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವವರ ಕಾರ್ಯ ಅನನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ವಿಶೇಷವಾಗಿ ಬಡ ಜನರಿಗೆ ಅನಕೂಲವಾಗಲಿಕ್ಕಾಗಿ ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ, ಕಾರ್ಡ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದರ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸಿ ಕಾರ್ಡ ಪಡೆದುಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿ, ವೈದ್ಯಾಧಿಕಾರಿ ಮಲ್ಲನಗೌಡ ಪಾಟೀಲ, ಎನ್‌ಜಿಓ ಮುಖ್ಯಸ್ಥ ರಫೀಕ ಇನಾಮದಾರ, ಫಾರ್ಮಾಸಿ ಅಧಿಕಾರಿ ಸುನೀಲ ನಿಂಬಾಳ್ಕರ, ಆಷಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 


ಸುದ್ದಿ ಓದಿ