ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ಶಾಸಕ ಸೋಮನಗೌಡ ಭೇಟಿ
ತಾಳಿಕೋಟಿ 25: ಇತ್ತೀಚಿಗೆ ಸಾಲ ಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಬಿ.ಬಿ.ಇಂಗಳಗಿ ಗ್ರಾಮದ ರೈತ ಬಸಪ್ಪ ಈರಪ್ಪ ನಾಯ್ಕೋಡಿ ಮನೆಗೆ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಬಡ ರೈತನ ಕುಟುಂಬಕ್ಕೆ ನಾನು ವೈಯಕ್ತಿಕವಾದ ಧನ ಸಹಾಯದೊಂದಿಗೆ ಮುಂದೆ ಸರಕಾರದಿಂದ ಸಿಗುವ ಪರಿಹಾರವನ್ನು ಒಂದು ತಿಂಗಳದೊಳಗಾಗಿ ಕೊಡಿಸಲು ಕ್ರಮವಹಿಸುತ್ತೇನೆ. ನನ್ನ ಕ್ಷೇತ್ರದ ಯಾವ ರೈತನು ಆತ್ಮಹತ್ಯೆಗೆ ಶರಣಾಗಬಾರದು ಇದು ನನಗೆ ನೋವಿನ ಸಂಗತಿ ನಿಮ್ಮ ಸಮಸ್ಯೆಗಳನ್ನು ನನ್ನ ಮುಂದೆ ತರಲು ಪ್ರಯತ್ನಿಸಿ ಆತ್ಮಹತ್ಯೆ ಸಮಸ್ಯೆಗೆ ಪರಿಹಾರ ಅಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಪ್ರಧಾನ ಕಾರ್ಯದಶರ್ಿ ಭೀಮನಗೌಡ ಲಚ್ಯಾಣ, ಶರಣಗೌಡ ಪಡಗಾನೂರ, ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು