ಬ್ಯಾಡ್ಗಿ

ಕ್ರೀಡಾಪಟುಗಳಿಗೆ ಕಬಡ್ಡಿ ಮ್ಯಾಟ್ ಅಳವಡಿಸಿಕೊಡುವುದಾಗಿ ಶಾಸಕ ಶಿವಣ್ಣನವರ ಭರವಸೆ

ಕ್ರೀಡಾಪಟುಗಳಿಗೆ ಕಬಡ್ಡಿ ಮ್ಯಾಟ್ ಅಳವಡಿಸಿಕೊಡುವುದಾಗಿ ಶಾಸಕ ಶಿವಣ್ಣನವರ ಭರವಸೆ

ಬ್ಯಾಡಗಿ 10: ಕಬಡ್ಡಿ ಕ್ರೀಡೆಗೆ ಬ್ಯಾಡಗಿ ಪಟ್ಟಣ ರಾಜ್ಯದಲ್ಲಿ ಅತ್ಯುತ್ತಮ ಹೆಸರು ಪಡೆದಿದ್ದು ಕ್ರೀಡಾಪಟುಗಳ ಅನುಕೂಲಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ ರೂ. ಅನುದಾನದಲ್ಲಿ ಕಬಡ್ಡಿ ಮ್ಯಾಟ್ ಅಳವಡಿಸಿಕೊಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು. 

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 

 ಕಬಡ್ಡಿ ದೇಶೀಯ ಕ್ರೀಡೆಯಾಗಿದ್ದು ಸದರಿ ಕ್ರೀಡೆಗೆ ಬಹು ಹಿಂದಿನಿಂದಲೂ ಪಟ್ಟಣದಲ್ಲಿ ಕ್ರೀಡಾಸಕ್ತರಿದ್ದು ಕಬಡ್ಡಿ ಅಭಿ ವೃದ್ಧಿಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ, ದೊರಕಿರುವ ಅವಕಾಶ ಬಹು ದೊಡ್ಡದು ಅದನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವ ಮೂಲಕ ಉತ್ತಮ ಕ್ರಿಡಾಪಟುಗಳಾಗುವಂತೆ ಸಲಹೆ ನೀಡಿದರು. 

ಭವಿಷ್ಯ ರೂಪಿಸಿಕೊಳ್ಳಿ: ಪದವಿ ಶಿಕ್ಷಣ ಪೂರೈಸಿಕೊಂಡು ತಾವೆಲ್ಲರೂ ನಿರ್ಗಮಿಸುತ್ತಿದ್ದೀರಿ ಆದರೆ ವಿದ್ಯಾರ್ಥಿ ಬದುಕಿನಲ್ಲಿ ಕಲಿಕೆ, ಗ್ರಹಿಕೆ, ಸಂಗ್ರಹಿಕೆ, ಸಂಶೋಧನೆ ಇನ್ನಿತರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಬರುವ ದಿನಗಳು ಸುಲಭವಾ ಗಿಲ್ಲ, ತಾವೆಲ್ಲರೂ ಸಂದರ್ಭಗಳನ್ನು ಮತ್ತು ಪರಿಣಾಮಗಳನ್ನು ಎದುರಿಸುವ ನಿಟ್ಟಿನಲ್ಲಿ ಮಾನಸಿಕವಾಗಿ ಮತ್ತು ದೈಹಿಕ ವಾಗಿ ಸಿದ್ಧರಾಗುವಂತೆ ಸಲಹೆ ನೀಡಿದರು. 

ದೇಶದ ಸಂಸ್ಕೃತಿಯನ್ನು ಸಾರಬೇಕು:ಹಿರೇಕೆರೂರು ಪದವಿ ಕಾಲೇಜು ಉಪನ್ಯಾಸಕ ಡಾ.ಕಾಂತೇಶರೆಡ್ಡಿ ಗೋಡಿಹಾಳ ಮಾತ ನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಮಹಾನ್ ದೇಶ ಭಾರತವಾಗಿದೆ, ನಾಡಿನಲ್ಲಿ ಕಲೆ, ಸಂಸ್ಕೃತಿ, ಪರಂಪರೆ, ಸಂಸ್ಕಾರಗಳಿಗೆ ಯಾವುದೇ ಕೊರತೆಯಿಲ್ಲ ಕೂಡಿಬಾಳುವ ಸಮತೆ ಇಡೀ ವಿಶ್ವಕ್ಕೆ ಬದುಕನ್ನು ಕಲ್ಪಿಸಿಕೊಟ್ಟಿದೆ ವಿಭಿನ್ನತೆಯ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರುವಂತೆ ಸಲಹೆ ನೀಡಿದರು. 

ಹಾವೇರಿ ಜಿಲ್ಲೆ ಪುಣ್ಯಭೂಮಿ: ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‌್ಯ ಡಾ.ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಅನೇಕ ದಾರ್ಶನಿಕರು, ಸಂತರು, ಸ್ವತಂತ್ರ್ಯವೀರರು, ಕವಿಗಳು, ಸಾಹಿತಿಗಳು ನಡೆದಾಡಿದ ಪುಣ್ಯಭೂಮಿ ಹಾವೇರಿ ಜಿಲ್ಲೆಯಾ ಗಿದ್ದು ದೇಶ-ಕೋಶಗಳ ಜಾಗೃತಿ ಪ್ರತಿಯೊಬ್ಬರಿಗೂ ಅವಶ್ಯಕ ಯುವಕರು ಪ್ರತಿಯೊಂದು ಮಾಹಿತಿ ಪಡೆದು ಭದ್ರವಾದ ಭಾರತ ಕಟ್ಟುವತ್ತ ಹೆಜ್ಜೆ ಹಾಕಬೇಕು ಯುವಕರಲ್ಲಿ ಮಾತೃಭಾಷೆ ಮತ್ತು ದೇಶಾಭಿಮಾನ ಕಡಿಮೆಯಾಗಕೂಡದು, ಯುವಕರು ಮನಸ್ಸು ಮಾಡಿದರೆ ಅಸಾಧ್ಯವನ್ನು ಸಾಧಿಸಿ ಗೆಲುವು ಹೊಂದಬಹುದು ಎಂದರು. 

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ದಾನಪ್ಪ ಚೂರಿ, ಪ್ರೇಮ ಬಿನ್ನಾಳ, ಜೆ.ಸಿ.ಇಂಡಿಮಠ, ಎಸ್‌.ಚಂದ್ರಕುಮಾರ, ಎಚ್‌.ಇ.ಸುನೀತಾ ರಾಜಕುಮಾರ ಉಕ್ಕುಂದ, ಡಾ.ಹೆಚ್‌.ಎಸ್‌.ಸುರೇಶ, ಬಿ.ಎನ್‌.ದೇವೇಂದ್ರ​‍್ಪ, ಚೇತನ ಮಂಜುನಾಥ, ಬಿ.ಎಸ್‌.ಚಿಕ್ಕಣ್ಣ ಹೆಚ್‌.ಜಿ.ಸಣ್ಣಗೌಡ್ರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ