ಸಂಕೇಶ್ವರ

ನೆರೆ ಹಾವಳಿ ಪ್ರದೇಶಗಳಿಗೆ ಶಾಸಕ ನಿಖಿಲ ಕತ್ತಿ ಭೇಟಿ

ನೆರೆ ಹಾವಳಿ ಪ್ರದೇಶಗಳಿಗೆ ಶಾಸಕ ನಿಖಿಲ ಕತ್ತಿ ಭೇಟಿ

ಸಂಕೇಶ್ವರ 27 : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿನ್ನೆಯಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹಿರಣ್ಯಕೇಶಿ ನದಿಯು ಉಕ್ಕಿ ಹರಿಯುತ್ತಿದೆ.  ಶಂಕರಲಿಂಗ ಮಠದ ನೀರಿನ ಪ್ರವಾಹದಿಂದ ಜಲಾವೃತಗೊಂಡಿದೆ. ಮಠದಲ್ಲಿ ನೀರು ತುಂಬಿಕೊಂಡಿದ್ದು, ಮಠದ ಅರ್ಚಕರಾದ ಶ್ರೀಪಾದ ಉಪಾಧ್ಯೆ, ಮದನ ಪುರಾಣಿಕ, ಬಾಳು ಜೋಶಿ ಅರ್ಚಕರು ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ನೀರಿನಲ್ಲಿ ಹೋಗಿ ಶ್ರೀ ಶಂಕರಲಿಂಗನಿಗೆ ಪೂಜೆಯನ್ನು ಮಾಡಲಾಗುತ್ತಿದೆ.  ಮಠಗಲ್ಲಿಯ ಅಪ್ಪಾ ಕುಲಕರ್ಣಿ ಇವರ ನಿವಾಸಕ್ಕೆ ನೆರೆ ಬಂದಿರುತ್ತದೆ.  ಢೋರ ಗಲ್ಲಿಯಲ್ಲಿ ಹನುಮಾನ ಮಂದಿರವು ಜಲಾವೃತಗೊಂಡಿದೆ.  ಲಕ್ಷ್ಮೀ ಗುಡಿ ಮುಂದಿನ ಭಾಗದಲ್ಲಿರುವ ಸ್ಥಂಭದ ಆನೆಯ ಮೂರ್ತಿಯು ಮುಳುಗಿರುತ್ತದೆ.  ಗಂಗೆ ಗೌರಿ ಕೂಡಿದೆ ಎಂದು ಹಿರಿಯರು ಹೇಳುವ ಮಾತಾಗಿದೆ.   

ನೆರೆ ಸಂತ್ರಸ್ತರ ಕಾಳಜಿ ಕೆಂದ್ರಗಳಾದ ಶಂಕರಲಿಂಗ ಕಾರ್ಯಾಲಯ, ಉರ್ದು ಶಾಲೆ, ಕನ್ಯಾಶಾಲೆ, ಜನತಾ ಪ್ಲಾಟದ ಸರಕಾರಿ ಶಾಲೆ ಇವುಗಳಿಗೆ ಹುಕ್ಕೇರಿ ಮತಕ್ಷೇತ್ರದ ಶಾಸಕ ನಿಖಿಲ ಉಮೇಶ ಕತ್ತಿ ಇವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಜನರಿಗೆ ಪ್ರತಿ ವರ್ಷ ಪ್ರವಾಹ ಬರುವುದರಿಂದ ಪ್ರವಾಹ ಪೀಡಿತ ಜನರಿಗೆ ಬೇರೆ ಕಡೆಗೆ ಶಾಶ್ವತ ನೆಲೆ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.  ನೀವು ಇಲ್ಲಿಂದ ವಸತಿಯನ್ನು ಖಾಲಿ ಮಾಡಬೇಕಾಗುವುದೆಂದು ನಿರಾಶ್ರಿತ ಪ್ರವಾಹ ಪೀಡಿತ ಜನರಿಗೆ ಹೇಳಿದರು.   

ಶಾಸಕರ ಜೊತೆಗೆ ನಗರದ ಗಣ್ಯವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಪುರಸಭೆಯ ಸದಸ್ಯರಾದ ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ಬಂಡು ಹತನೂರಿ, ನಂದು ಮುಡಶಿ, ಅಮರ ನಲವಡೆ, ಬಸವರಾಜ ಬಾಗಲಕೋಟಿ ಮೊದಲಾದವರು ಇದ್ದರು.   

 


ಸುದ್ದಿ ಓದಿ