ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ನಡಹಳ್ಳಿ ಭೂಮಿ ಪೂಜೆ
ಮುದ್ದೇಬಿಹಾಳ: ರಾಜ್ಯದಲ್ಲಿ ಹೆಚ್ಚಿನ ಅನುದಾನವನ್ನು ತಂದು ನಮ್ಮ ಮತಕ್ಷೇತ್ರವನ್ನು ಅಬಿವೃದ್ಧಿಯನ್ನು ಮಾಡುತ್ತಿದ್ದೇನೆ ಬೆಂಗಳೂರಿನ ವಿಮಾಣ ನಿಲ್ದಾಣ ಪ್ರವೇಶದ ಪ್ರಮುಖ ಸುಂದರ ರಸ್ತೆಯ ಉಲ್ಲಾಸದ ಅನುಭವದ ಮಾದರಿಯಲ್ಲೇ ನಾಲತವಾಡ ಪಟ್ಟಣದ ಪ್ರವೇಶದ ಹೆದ್ದಾರಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಿ ಹೂಗಿಡಗಳು ಡಿವೈಟರ್ಗಳ ಮದ್ಯೆ ದೀಪಗಳ ಅಳವಡಿಸುವ ಕನಸು ಶೀಘ್ರದಲ್ಲೇ ಹಿಡೇರಿಸುತ್ತೇನೆ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ನಾಲತವಾಡ ಪಟ್ಟಣದ ನಾನಾ ವಾರ್ಡುಗಳಲ್ಲಿ ಸಿಸಿ ರಸ್ತೆಗಳು, ಲೋಕೋಪಯೋಗಿ ಇಲಾಖೆಯಡಿ ಲಿಂಗಸಗೂರ ಶಿರಾಡೋಣ ರಸ್ತೆ ಅಗಲೀಕರ ಹಾಗೂ ಆರೇಶಂಕರ ನಾಗಬೇನಾಳ ಗ್ರಾಮದಲ್ಲಿ ಸಿಸಿ ರಸ್ತೆಗಳ ಸುಮಾರು 22 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಮ್ಮಿಶ್ರ ಸರಕಾರದ ಅಡತಡೆಗಳು ಅತ್ತ ಎರಡು ವರ್ಷಗಳ ಕೊರೊನಾ ಕಿಚ್ಚಿನ ಸಾಕಷ್ಟು ತೊಂದರೆಗಳಿದ್ದರೂ, ಇರುವ ಒಂದುವರೆ ವರ್ಷಗಳ ಅವಧಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸುಮಾರು 3.50 ಸಾವೀರ ಕೋಟಿ ಅನುದಾನದ ತಂದಿದ್ದೇನೆ, ಇದರೊಟ್ಟಿಗೆ ಈಗಾಗಲೇ 40 ಗ್ರಾಮಗಳನ್ನು ಅಭಿವೃದ್ದಿಗೊಳಿಸಿದ್ದೇವೆ, ಪ್ರಮುಖವಾಗಿ ನಾಲತವಾಡ ಭಾಗದಲ್ಲಿ ರೈತರ ಹಿತ ಮುಂದಿಟ್ಟುಕೊಂಡು ಹಸಿರು ಕ್ರಾಂತಿ ಸೃಷ್ಟಿಸುತ್ತೇವೆ, ಈ ಭಾಗದ ರೈತರಿಗೆ 24 ಗಂಟೆಗಳ ತ್ರೀಪೆಸ್ ವಿದ್ಯುತ್ ಪೂರೈಕೆ ಹಿತದೃಷ್ಟಿಯಿಂದ ವೀರೇಶನಗರದಲ್ಲಿ ಈಗಾಗಲೇ 220 ಕೆವಿ ವಿದ್ಯುತ್ ಉತ್ಪಾದನಾ ಘಟಕ ಕಾಮಗಾರಿ ಮುಗಿಯುವ ಹಂತ ತಲುಪಿದೆ. ಪಟ್ಟಣದಲ್ಲಿ ಶೀಘ್ರವೇ ಪ್ರತಿ ಮನೆಗಳಿಗೂ ಸದಾ ನೀರು ಸಿಗುವ ನಿಟ್ಟಿನಲ್ಲಿ ನಳಗಳ ಅಳವಡಿಕೆ ಆರಂಭಕ್ಕೆ ಚಾಲನೆ ನೀಡುತ್ತೇನೆ,ನನ್ನ ಅವಧಿಯಲ್ಲಿ ಅಭಿವೃದ್ದಿಗೊಳಿಸಿದ ಎಲ್ಲಾ ಕಾರ್ಯಗಳನ್ನು ಜನರ ಮುಂದೆ ತರುತ್ತೇನೇ ಎಂದರು.ಮುದ್ದೇಬಿಹಾಳ ತಾಳಿಕೋಟ ಪಟ್ಟಣ ಅಭಿವೃದ್ದಿ ನನ್ನ ಗುರಿ ಎಂದರು. ಕೃಷ್ಣಾ ನದೀ ತೀರದ ಪುನರ್ವಸತಿ ಗ್ರಾಮಗಳ ಅಭಿವೃದ್ದಿಗೆ ಈಗಾಗಲೇ 60 ಕೋಟಿ ಅನುದಾನ ತಂದಿದ್ದು 40 ಕೋಟಿ ವೆಚ್ಚದ ಕಾಮಗಾರಿಗಳು ಮುಕ್ತಾಯ ಹಂತ ಕಂಡಿವೆ,ಇನ್ನುಳಿದ ಹಲವು ಕಾಗಾರಿಗಳಿಗೆ ಅಧಿವೇಶನದ ನಂತರ ಚಾಲನೆ ನೀಡಲಾಗುತ್ತದೆ, ನನ್ನ ಒಂದುವರೆ ವರ್ಷದ ಅವಧಿಯಲ್ಲಿ ಇಷ್ಟು ಸಾಕಷ್ಟು ಅಭಿವೃದ್ದಿಗೊಳಿಸಿದ್ದೇನೆ ಎಂದರು.
ಸುರೇಶ ಹಿರೇಮಠ, ಪ.ಪಂ ಸಿಓ ಎಸ್.ಎಸ್.ಬಾಗಲಕೋಟ, ಎಂ.ಎಸ್.ಪಾಟೀಲ, ಸೋಮನಗೌಡ ಬಿರಾದಾರ, ನಿಂಗಣ್ಣ ಬಪ್ಪರಗಿ, ಎ.ಜಿ.ಗಂಗನಗೌಡ್ರ, ಮುತ್ತು ಅಂಗಡಿ, ಪ.ಪಂ ಸದಸ್ಯರಾದ ಡಾ.ಶರಣಬಸಪ್ಪ ಗಂಗನಗೌಡ್ರ, ಬಸವರಾಜ ಗಂಗನಗೌಡ್ರ, ಜಿ.ಮಹಾಂತೇಶ, ಶರಣಪ್ಪ ಗಂಗನಗೌಡ್ರ, ಚನ್ನಪ್ಪಗೌಡ ಹಂಪನಗೌಡ್ರ, ಜಗದೀಶ ಕೆಂಭಾವಿ, ವೀರೇಶ ಚಲವಾದಿ ಲಕ್ಷ್ಮಿಬಾಯಿ ಕ್ಷತ್ರಿ ೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು ಸೇರಿದಂತೆ ಸ್ಥಳಿಯ ಗಣ್ಯರು ಇನ್ನೀತರರು ಇದ್ದರು.
ಬಾಕ್ಸ್ :- ಚಾಲನೆ: ಶಿರಾಡೋಣ-ಲಿಂಗಸ್ಗೂರ ಎಸ್ಎಚ್-41 ಕ್ಕೆ ಅಮರೇಶ್ವರ ದೇವಸ್ಥಾನದಿಂದ ವೀರೇಶ್ವರ ವೃತ್ತದವರೆಗೆ9.95 ಕೋಟಿ, ವೀರೇಶ್ವರ ವೃತ್ತದಿಂದ ವೀರೇಶನಗರದವರೆಗೆ 9.80 ಕೋಟಿ, ಪೌರಾಡಳಿತ ಇಲಾಖೆಯ 48 ಲಕ್ಷ ವೆಚ್ಚದಲ್ಲಿ ವಾರ್ಡುಗಳಲ್ಲಿ 48 ಲಕ್ಷ, ವಾರ್ಡ 1 ಮತ್ತು 2ರಲ್ಲಿ 58.30 ಲಕ್ಷ ವೆಚ್ಚದ ಸಿಸಿ ರಸ್ತೆ, 5ನೇ ವಾರ್ಡಿನಲ್ಲಿ 51 ಲಕ್ಷದಲ್ಲಿ ಸಿಸಿ ರಸ್ತೆ,10ನೇ ವಾರ್ಡಿನಲ್ಲಿ 23.62 ಲಕ್ಷದ ಸಿಸಿ ರಸ್ತೆ,ಪಟ್ಟಣದ ಜಗದೇವನಗರ, ಆಜಾದ್ ನಗರ, ಬಸವೇಶ್ವರ ವೃತ್ತ, ಗಚ್ಚಿನಬಾವಿ ಓಣಿ, ಮಹೇಬೂಬ ನಗರ, ಪಿಲೆಕ್ಕಮ್ಮ ದೇಗುಲ ರಸ್ತೆ ಸೇರಿದಂತೆ ಆರೇಶಂಕರ ಗ್ರಾಮದಲ್ಲಿ 1 ಕೋಟಿ ವೆಚ್ಚದ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು.
ಬಾಕ್ಸ್ :- ಸಿಎಂ ಆಗಮನ: ಪಟ್ಟಣದ ಬಸ್ನಿಲ್ದಾಣ ಸೇರಿದಂತ ಮುದ್ದೇಬಿಹಾಳ ಮತಕ್ಷೇತ್ರದಲ್ಲ್ರಿ ಸಾವೀರಾರು ಕೋಟಿಯ ಅಭಿವೃದ್ದಿ ಕಾಮಗಾರಿಗಳ ಲೋಕರೆ್ಣಗಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ಫೆಬ್ರುವರಿ ತಿಂಗಳಲ್ಲಿ ಆಗಮಿಸಲಿದ್ದಾರೆ, ಜೊತೆಗೆ ಇನ್ನು ಕೈಗೆತ್ತಿಕೊಳ್ಳಲಾದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ನಡಹಳ್ಳಿ ತಿಳಿಸಿದರು.
ಫೋಟೋ ಇದೇ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸ್ಥಳೀಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭೂಮಿ ಪೂಜೆ ನೆರವೇರಿಸಿದರು.