ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಶಾಸಕ ನ್ಯಾಮಗೌಡ ಭೂಮಿಪೂಜೆ
ಲೋಕದರ್ಶನ ವರದಿ,
ಜಮಖಂಡಿ: 24: ಸಿಕ್ಕಲಗಾರ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಬಂದು ಉತ್ತಮ ನಾಗರಿಕರಾಗಿ ಜೀವನ ನಡೆಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಮುಧೋಳ ರಸ್ತೆಯಲ್ಲಿರುವ ಸಿಕ್ಕಲಗಾರ ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ 2022-23ನೇ ಸಾಲಿನ ಕ್ರಿಯಾ ಯೋಜನೆಯಡಿಯಲ್ಲಿ ಸಮುದಾಯ ಭವನ ನಿಮರ್ಾಣ ಭೂಮಿಪೂಜೆ ಹಾಗೂ ಹೈಮಾಕ್ಸ್ ರೈಟ್ಸ್ ಅಳವಡಿಕೆ ಹಾಗೂ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸದಾಶಿವ ದೇವಸ್ಥಾನ ನಿರ್ಮಾಣಕ್ಕೆ ಕಾಂಗ್ರೇಸ್ ಪಕ್ಷದ ಆಡಳಿತದಲ್ಲಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ 10ಲಕ್ಷ ಅನುದಾನ ನೀಡಲಾಗಿದೆ. ಅನಧಿಕೃತ ಮನೆಗಳನ್ನು ಅಧಿಕೃತವನ್ನಾಗಿ ಮಾಡಿ 69 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆ ಶಿಕ್ಷಣವನ್ನು ನೀಡಬೇಕು. ಎಲ್ಲ ಸಮಾಜದಂತೆ ಅವರು ಕೂಡಾ ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು. ಸರ್ಕಾರ ಜಾರಿ ಮಾಡಿದ ಯೋಜನೆಗಳನ್ನು ಯುವಕ ಯುವತಿಯರು ಸದುಪಯೋಗ ಪಡೆಸಿಕೊಂಡು ಉದ್ಯೋಗಿಗಳಾಗಬೇಕು ಎಂದರು.
ಸಿಕ್ಕಲಗಾರ ಸಮಾಜ ಅಭಿವೃದ್ಧಿಗೆ ದಿ.ರಾಮಣ್ಣ ಕಲೂತಿ,ಸಿದ್ದು ನ್ಯಾಮಗೌಡ ಅವರ ಸತತ ಶ್ರಮಿಸಿದ್ದಾರೆ. ಕಾಂಗ್ರೇಸ್ ಪಕ್ಷ ದೀನದಲಿತರ ಬಡವರ ಕೂಲಿಕಾರ್ಮಿಕರ ಹಿಂದುಳಿದವರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಸಿಕ್ಕಲಗಾರ ಸಮಾಜ ಭಾಂದವರು ಆರೋಗ್ಯವಂತರಾಗಿರಲು ಶುದ್ಧ ಕುಡಿಯುವ ನೀರಿನ ಘಟಕ, ಕಾಲೋನಿ ಸ್ವಚ್ಛವಾಗಿಡಲು ಒಳಚರಂಡಿ, ಶೌಚಾಲಯ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಶಿ ಮಾತನಾಡಿ, ಕಾಂಗ್ರೇಸ್ ಪಕ್ಷ ಹಿಂದುಳಿದ ಜನಾಂಗದ ಅಭಿವೃದ್ದಿಗೆ ಸದಾ ಸಹಾಯಹಸ್ತ ನೀಡುತ್ತ ಬಂದಿದೆ. ಈ ಚುನಾವಣೆಯಲ್ಲಿ ಅದರ ಋಣಭಾರ ತೀರಿಸಬೇಕು ಎಂದರು.
ನಗರಸಭೆ ಸದಸ್ಯರಾದ ಈಶ್ವರ ವಾಳೆನ್ನವರ, ಸುನೀಲ ಶಿಂದೆ, ಕಾಂಗ್ರೇಸ್ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಚ ರಫೀಕ ಬಾರಿಗಡ್ಡಿ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶೆಹರಾಬಾನು ಪಕಾಲಿ, ಪರಮಾನಂದ ಗವರೋಜಿ, ಪುತ್ಥಳಾಬಾಯಿ ಚೌಧರಿ, ಅಬು ಶಿರೋಳ, ಸದಾಶಿವ ಸಿಕ್ಕಲಗಾರ, ಮಹಾದೇವ ಸಿಕ್ಕಲಗಾರ, ರವಿ ಸಿಕ್ಕಲಗಾರ, ಅಪ್ಪಾಶಿ ಸಿಕ್ಕಲಗಾರ, ಶಿವಾಜಿ ಸಿಕ್ಕಲಗಾರ, ಪರಶುರಾಮ ಸಿಕ್ಕಲಗಾರ, ಹನುಮಂತ ಸಿಕ್ಕಲಗಾರ, ಗಂಗಪ್ಪ ಸಿಕ್ಕಲಗಾರ ಇತರರು ಇದ್ದರು. ಗಂಗಪ್ಪ ಸಿಕ್ಕಲಗಾರ ಸ್ವಾಗತಿಸಿದರು. ಶಿವಾನಂದ ಕೊಣ್ಣೂರ ನಿರೂಪಿಸಿ ವಂದಿಸಿದರು.