ಎಸ್ಜೆಜೆಎಂ ಶಾಲೆಗೆ ಶಾಸಕ ಬಸವರಾಜ ಶಿವಣ್ಣನವರ ಭೇಟಿ
ಬ್ಯಾಡಗಿ: ಸ್ಥಳೀಯ ಎಸ್ಜೆಜೆಎಂ ಶಾಲೆಗೆ ಭೇಟಿ ನೀಡಿದ ಶಾಸಕ ಬಸವರಾಜ ಶಿವಣ್ಣನವರ ಶೌಚಾಲಯ, ಕೊಠಡಿ, ಸೇರಿ ದಂತೆ ಶಿಕ್ಷಕರ ಕೊರತೆಯನ್ನು ನೀಗಿಸಲು ಸಮಸ್ಯೆಗಳಿಗೆ ಮುಂದಾದರು.
ಪಟ್ಟಣದ ಎಸ್ಜೆಜೆಎಂ ಕರ್ನಾಟಕ ಪಬ್ಲಿಕ ಶಾಲೆಯ ಶೌಚಾಲಯ ದುರ್ವಾಸನೆಯಿಂದ 10 ತರಗತಿ ಉರ್ದು ವಿದ್ಯಾರ್ಥಿ ನಿಯರು ಕೊಠಡಿಯಿಂದ ಹೊರಗೆ ಕುಳಿತು ಪಾಠ ಕೇಳುವಂತಾಗಿತ್ತು, ಸುದ್ದಿ ತಿಳಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಲ್ಲಿ ಮುಂದಾದರು.
ಶತಮಾನ ಕಂಡ ಶಾಲೆಯ ದುಸ್ಥಿತಿ: ಶತಮಾನ ಕಂಡ ಇಲ್ಲಿನ ಎಸ್ಜೆಜೆಎಂ ಶಾಲೆಯಲ್ಲಿ ಎಲ್ಲಾ ವಿಭಾಗಗಳಿಂದ ಸುಮಾರು 1358 ವಿದ್ಯಾರ್ಥಿಗಳಿದ್ದು, ಇಷ್ಟೊಂದು ವಿದ್ಯಾರ್ಥಿಗಳ ಬಳಕೆಗೆ ಕೇವಲ 3 ಶೌಚಗೃಹಗಳಿದ್ದು ಯಾರಿಗೂ ಸಾಕಾಗುತ್ತಿರಲಿಲ್ಲ ಈ ಕುರಿತು ವಿದ್ಯಾರ್ಥಿಗಳು ಭೇಟಿ ನೀಡಿದ ಶಾಸಕರೆದುರು ತಮ್ಮ ಅಳಲನ್ನು ತೋಡಿಕೊಂಡರು
ಶೌಚಾಲಯ ಸರಿಪಡಿಸಲು ಕ್ರಮ: ಎಸ್ಜೆಜೆಎಂ ಶಾಲೆಗೆ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಯುಜಿಡಿ ಅಧಿಕಾರಿಗಳನ್ನು ಕರೆಸಿಕೊಂಡ ಶಾಸಕರು ದುರ್ವಾಸನೆ ಪರಿಹರಿಸುವ ನಿಟ್ಟಿನಲ್ಲಿ ನಾಳೆಯಿಂದಲೇ ಎಲ್ಲಾ ಶೌಚಗೃಹಗಳನ್ನು ಸ್ವಚ್ಚಗೊಳಿಸುವುದು ಸೇರಿದಂತೆ ಯುಜಿಡಿ ಲೈನ್ಗೆ ಸದರಿ ಶೌಚಗಳನ್ನು ಕನೆಕ್ಷನ್ ಕೊಡುವಂತೆ ಸೂಚಸಿದರು.
ಮನಸ್ಸಿಗೆ ನೋವಾಗಿದೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಕುಳಿತು ಪಾಠ ಕೇಳುತ್ತಿರುವ ಘಟನೆ ಕುರಿತು ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಮಕ್ಕಳು ಶಾಲೆಯಿಂದ ಹೊರಗೆ ಕುಳಿತು ಪಾಠಗಳನ್ನು ಕೇಳುತ್ತಿರುವ ವಿಷಯ ನನ್ನ ಮನಸ್ಸಿಗೆ ನೋವಾಗಿದೆ ಎಂದ ಅವರು, ಶಿಕ್ಷಣ ಮಂತ್ರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಇನ್ನೂ 10 ಕೊಠಡಿಗಳನ್ನು ನಿರ್ಮಿಸಲು ಅನುದಾನ ನೀಡುವಂತೆ ಮನವಿ ಮಾಡಿದರು
ಯುಜಿಡಿ ಮತ್ತು ಪುರಸಭೆಯಿಂದ ಶೌಚಾಲಯ ನಿರ್ಮಾಣ: ಇರುವ ಶೌಚಗೃಹವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಿರುವುದು ಶಾ;ಆ ಸಿಬ್ಬಂದಿಗಳ ಕೆಲಸ, ಶಾಲೆಯಲ್ಲಿ ಕೊಳವೆಬಾ ಕೊರೆಸಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ, ಇರುವ ಕಟ್ಟಡವನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಬೇಕು, ಕೂಡಲೇ ಸ್ವಚ್ಛತೆಗೆ ಕ್ರಮತೆಗೆದುಕೊಂಡು ನಾಳೆಯಿಂದ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಕುಳಿತುಕೊಳ್ಳದಂತೆ ತುರ್ತು ಕ್ರಮವಹಿಸಿ ಎಂದ ಅವರು ಯುಜಿಡಿ ಮತ್ತು ಪುರಸಭೆಯಿಂದ ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ಎರಡೂ ಇಲಾಖೆ ಅಧಿಕಾರಿಗಳು ತಾಕೀತು ಮಾಡಿದರು.
ಈ ವೇಳೆ ಪ್ರಾಚಾರ್ಯ ಮಾಲತೇಶ ಬಂಡೆಪ್ಪನವರ, ಡಿ.ಬಿ.ಕುಸಗೂರು, ದಾನಪ್ಪ ಚೂರಿ, ಮುನಾಫ್ ಎರೇಶಿಮಿ, ಅರುಣ ಪಾಟೀಲ, ಬಸವರಾಜ ಕೋಣನವರ, ಗಿರೀಶ ಇಂಡಿಮಠ ಇತರರಿದ್ದರು.