‘ಸಸಿ’ ನೆಡುವ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
ಬ್ಯಾಡಗಿ:ಪ್ರಾಕೃತಿಕ ಪ್ರಪಂಚದ ಮೇಲೆ ನಮ್ಮ ಬುದಕು ಅವಲಂಬಿತವಾಗಿದ್ದು ಪರಿಸರದ ಮೇಲೆ ನಡೆಯುತ್ತಿರುವ ದಾಳಿ ಗಳ ವಿರುದ್ಧ ಹಾಗೂ ವಿನಾಶದ ಉದ್ದೇಶದಿಂದ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವಾಗಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸ್ನೇಹಿ ಬಳಗ ಹಾಗೂ ರೋಟರಿ ಸಂಸ್ಥೆ ಮತ್ತು ಪುರಸಭೆ ಕಾರಾ್ಯ ಲಯ ಇವರ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ ‘ಸಸಿ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಶತಮಾನದಲ್ಲಿ ಬದುಕುಳಿಯಬೇಕಾದರೆ ನೈಸರ್ಗಿಕ ಪ್ರಪಂಚದ ಭವಿಷ್ಯದ ಬಗ್ಗೆ ಕಾಳಜಿಯು ನಮಗಿರಬೇಕಾ ಗಿದೆ, ಸ್ವಯಂ ಪ್ರೇರಣೆಯಿಂದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ನಿಲ್ಲಬೇಕಲ್ಲದೇ ಪರಿಸರ ನಾಶಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೇರಿದಂತೆ ನಾವೆಲ್ಲರೂ ಕೆಲ ದೃಢ ನಿರ್ಧಾರ ತ್ವರಿತವಾಗಿ ಕೈಗೊಳ್ಳಬೇಕಾಗಿದೆ ಎಂದರು.
ಅರಣ್ಯ ಸಂರಕ್ಷಣೆ:ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಜಾಗತಿಕ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ, ಆದರೆ ಇದಕ್ಕೆ ವಿರುದ್ಧವಾಗಿ ಪರಿಸರ ನಾಶವಾಗುತ್ತಿದೆ, ಅವಕಾಶ ಸಿಕ್ಕಾಗಲೆಲ್ಲಾ ಹವಾಮಾನ ವೈಪರೀತ್ಯಗಳು ನಮ್ಮ ಬದುಕನ್ನು ದುಸ್ತರಗೊಳಿಸುತ್ತಿವೆ, ಅರಣ್ಯ ಪ್ರದೇಶವನ್ನು ಹೇಗೆ ಉತ್ತಮವಾಗಿ ಸಂರಕ್ಷಿಸಬಹುದು ಎಂಬುದಕ್ಕೆ ತಜ್ಞರ ಅಭಿಪ್ರಾಯವನ್ನು ಸರ್ಕಾರಗಳು ಪಡೆದುಕೊಳ್ಳುವ ಮೂಲಕ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಮಂಜುನಾಥ ಉಪ್ಪಾರ, ಸದಸ್ಯರಾದ ಶಿವರಾಜ ಚೂರಿ, ಪರಸರ ಸ್ನೇಹಿ ಬಳಗದ ರಾಜು ಹುಲ್ಲತ್ತಿ, ಮಂಜುನಾಥ ರಾಮಣ್ಣನವರ, ಶ್ರೇಯಸ್, ಮಂಜುನಾಥ ಗರಸಂಗಿ, ಮಾಲತೇಶ ಆಡಿನವರ, ಪವಾಡೆಪ್ಪ, ನಿಂಗಪ್ಪ ಕೂಡಿಹಳ್ಳಿ, ಆನಂದ ಕರ್ನೂಲ, ಪುರಸಭೆ ಸಿಬ್ಬಂದಿಗಳಾದ ನಾಗರತ್ನಾ ಹೊಸ್ಮನಿ, ತಬಸ್ಸುಮ್ ಎಂ.ಪಿ.ಯಲ್ಲಣ್ಣನವರ, ಇನ್ನಿತರರರು ಉಪಸ್ಥಿತರಿದ್ದರು.
ಫೋಟೋ-05ಬಿವೈಡಿ7-ಬ್ಯಾಡಗಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸ್ನೇಹಿ ಬಳಗ ಹಾಗೂ ರೋಟರಿ ಸಂಸ್ಥೆ, ಪುರಸಭೆ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ ‘ಸಸಿ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.