ಉದ್ಯಾವನ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿಪೂಜೆ
MLA Ashok Managuli performs Bhoomi Pooja for garden work
ಸಿಂದಗಿ 20 : ಪಟ್ಟಣದಲ್ಲಿರುವ ಸುಮಾರು 80 ಉದ್ಯಾನವನಗಳಲ್ಲಿ 15 ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಿ ಇಲ್ಲಿನ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳು, ನಿವಾಸಿಗಳಿಗೆ ವಾಯುವಿಹಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಸೋಂಪೂರ ರಸ್ತೆಯಲ್ಲಿರುವ ಹಿರೇಮಠ ಲೇಓಟ್‌ನಲ್ಲಿ ನಗರ ಸಭೆ ಅಮೃತ 2.0 ಯೋಜನೆಯಡಿ ರೂ 23 ಲಕ್ಷ 39 ಸಾವಿರಗಳ ವೆಚ್ಚದಲ್ಲಿ ಉದ್ಯಾವನ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಪಟ್ಟಣದ ಮಹಿಳೆಯರಿಗೆ, ಹಿರಿಯರಿಗೆ, ಮಕ್ಕಳಿಗೆ ವಿಶೇಷವಾದ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ನಗರದ ಎಲ್ಲ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಅಮೃತ 2.0 ಯೋಜನೆಯಡಿ ಅನುದಾನ ರಾಜ್ಯದ ಎಲ್ಲ ನಗರ ಸಭೆಗಳಿಗೆ ಮಂಜೂರಾಗಿಲ್ಲ ಕೆಲವೇ ನಗರಸಭೆಗಳಲ್ಲಿ ರೂ 3 ಕೋಟಿ. 15 ಲಕ್ಷಗಳಲ್ಲಿ ರೂ 75 ಲಕ್ಷಗಳಲ್ಲಿ ಮೂರು ಉದ್ಯಾನವನಗಳ ಅಭಿವೃದ್ಧಿಗೆ ಅನುದಾನ ತೆಗೆದುಕೊಳ್ಳಲಾಗಿದೆ
ಅಲ್ಲದೆ 2.40 ಲಕ್ಷಗಳಲ್ಲಿ ಕೆರೆ ಪಕ್ಕದಲ್ಲಿರುವ ಶಾಂತವೀರ ಉದ್ಯಾನವನ ಉನ್ನತಿಕರಣಕ್ಕಾಗಿ ಮಾಡುವ ಮೂಲಕ ಜಗದ್ಗುರು ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮೂರ್ತಿ ಅನಾವರಣಗೊಳಿಸಿ ಇಲ್ಲಿನ ಸಾರ್ವಜನಿಕರ ಅನುಕೂಲವಾಗುತ್ತದೆ. 1999ರಲ್ಲಿ ನಿರ್ಮಾಣವಾದ ಕೆರೆಯನ್ನು ಕಲ್ಲಿನ ತಡೆಗೋಡೆ ನಿರ್ಮಾಣ ಮಾಡಲು ರೂ 90 ಲಕ್ಷ, ರೂ 50 ಲಕ್ಷ, ಮಕ್ಕಳ ಆಟೋಪಕರಣ, ಪಟ್ಟಣದ ಎಲ್ಲ ಉದ್ಯಾನವನಗಳ ನಿರ್ಮಿಸಲು ಮಿಸಲಿಟ್ಟು ಕಾಮಗಾರಿ ಮಾಡಲಾಗುತ್ತಿದೆ ಕಾರಣ ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.ಕೋಲ್ಡ ಸ್ಟೋರೇಜ್ ಮಂಜೂರು; ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ಕೋಲ್ಡ ಸ್ಟೋರೆಜ್ ಬಹುದಿನಗಳ ಅವಶ್ಯಕತೆಯಿತ್ತು ಅದನ್ನು ಎಪಿಎಂಸಿ ಸಚಿವ ಶಿವಾನಂದ ಪಾಟೀಲರು ರೂ 6 ಕೋಟಿ 65 ಲಕ್ಷ ಮಂಜೂರು ನೀಡಿದ್ದಾರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಪಿಎಂಸಿ ಸಚಿವರಿಗೆ ಕ್ಷೇತ್ರದ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಪ್ರಭುಲಿಂಗ ಲೋಣಿ, ಪಿ.ಜಿ. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಶಿವು ಬಡಿಗೇರ,
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 