ರಾಯಬಾಗ

ರಸ್ತೆ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

ರಸ್ತೆ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

ಲೋಕದರ್ಶನ ವರದಿ

ರಾಯಬಾಗ 21: ರಸ್ತೆಗಳನ್ನು ಅಗಲೀಕರಿಸಿ ಒಳ್ಳೆ ಗುಣಮಟ್ಟದ ರಸ್ತೆಗಳನ್ನು ನಿಮರ್ಿಸಿ ಗ್ರಾಮೀಣ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಡಿ.ಎಮ್.ಐಹೊಳೆ ಅವರು ಗುತ್ತಿಗೇದಾರರಿಗೆ ಮತ್ತು ಇಂಜನೀಯರರಿಗೆ ಸೂಚಿಸಿದರು.

ಬುಧವಾರ ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯಡಿ ಮಂಜೂರಾದ 01 ಕೋಟಿ ರೂ. ವೆಚ್ಚದ ಕೆಂಪಟ್ಟಿ-ನಂದಿಕುರಳಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಟ್ಟು, ಮುಂದೆ ನಿಂತು ಒಳ್ಳೆ ರಸ್ತೆ ನಿಮರ್ಿಸಿಕೊಳ್ಳಬೇಕೆಂದು ಹೇಳಿದರು. ಕ್ಷೇತ್ರದಲ್ಲಿ ನೀರಾವರಿ, ರಸ್ತೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದೆ ಎಂದು ತಿಳಿಸಿದರು.

ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ಘೋರ್ಪಡೆ, ಶಿವಪ್ಪ ನಾಯಿಕ, ಮಹಾದೇವ ನಾಯಿಕ, ಸದಾಶಿವ ಕಾಂಬಳೆ, ಹನಮಂತ ಪವಾಡೆ, ಬಂಡಿ ಸಬಕಾಳೆ, ಯಲ್ಲಪ್ಪ ನಾಯಿಕ, ಲಕ್ಷ್ಮಣ ನಾಯಿಕ, ಪಿಡಬ್ಲ್ಯುಡಿ ಎಇಇ ಆರ್.ಕೆ.ನಿಂಗನೂರೆ, ಆರ್.ಬಿ.ಮನವಡ್ಡರ, ಮಹೇಶ ಕರಮಡಿ, ಶಿವು ಮಗದುಮ್ಮ ಸೇರಿದಂತೆ ಅನೇಕರು ಇದ್ದರು. 

 

ಸುದ್ದಿ ಓದಿ