ಮನರಂಜನೆ

ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ ವಿವಾಹಕ್ಕೂ ಮುಂಚಿನ ಶಾಸ್ತ್ರಗಳು ಆರಂಭ

ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ ವಿವಾಹಕ್ಕೂ ಮುಂಚಿನ ಶಾಸ್ತ್ರಗಳು ಆರಂಭ

ಬೆಂಗಳೂರು, ಫೆ 09 : ಪ್ರೇಮಿಗಳ ದಿನದಂದು ಹಸೆಮಣೆ ಏರಲಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮನೆಯಲ್ಲಿ ಮದುವೆಗೆ ಬೇಕಾದ ಸಿದ್ಧತೆಗಳು, ಸಂಭ್ರಮ ಮನೆ ಮಾಡಿದೆ.  ಇದೇ ವೇಳೆ ಮಿಲನಾ ಮನೆಯಲ್ಲಿ ಮದುವೆಗೂ ಮುಂಚಿನ ಶಾಸ್ತ್ರಗಳು ಆರಂಭಗೊಂಡಿವೆ. ಈ ಕುರಿತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಮಿಲನಾ ಹಂಚಿಕೊಂಡಿದ್ದಾರೆ. 'ಮದುವೆ ಶಾಸ್ತ್ರಗಳ ಪ್ರಾರಂಭ. ನಮ್ಮ ಕುಟುಂಬದಲ್ಲಿ ಯಾವುದೇ ಮದುವೆ ನಡೆದರೂ ಮೊದಲು ಮಾಡುವ ಪೂಜೆ ಇದು' ಎಂದು ಅವರು ಮಾಹಿತಿ ನೀಡಿದ್ದಾರೆ.  ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದ್ದು, ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಿಲನಾ-ಕೃಷ್ಣ ಜೋಡಿಗೆ ಶುಭಕೋರುತ್ತಿದ್ದಾರೆ. ಇನ್ನು ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿರುವ ಈ ಚಂದದ ಜೋಡಿಯ ಮದುವೆ ಇದೇ 14 ರಂದು ಈಜುಕೊಳದ ಮಧ್ಯೆ ನಿರ್ಮಿತವಗುವ ಮಂಟಪದಲ್ಲಿ ನಡೆಯಲಿದೆ. ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಮಿಲನಾ ಮತ್ತು ಕೃಷ್ಣ ಅವರ ಮದುವೆ ದಿನವೇ 'ಲವ್‌ ಮಾಕ್‌ಟೇಲ್‌ 2' ಚಿತ್ರದ ಮೊದಲ ಹಾಡು ರಿಲೀಸ್‌ ಆಗಲಿರುವುದು ವಿಶೇಷ.  ಚಿತ್ರಕ್ಕೆ ನಕುಲ್‌ ಅಭ್ಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. 

  


ಸುದ್ದಿ ಓದಿ