ಯರಗಟ್ಟಿ

ಕೈತಪ್ಪಿದ ಟಿಕೆಟ್‌: ಪಂಚನಗೌಡ ಸೌರಭ ಚೋಪ್ರಾಗೆ ಬೆಂಬಲ

ಕೈತಪ್ಪಿದ ಟಿಕೆಟ್‌: ಪಂಚನಗೌಡ ಸೌರಭ ಚೋಪ್ರಾಗೆ ಬೆಂಬಲ

ಲೋಕದರ್ಶನ ವರದಿ 

ಯರಗಟ್ಟಿ 12: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರೂ ಟಿಕೆಟ್ ತಪ್ಪಿಸಿರುವುದಕ್ಕೆ ಅಸಮಾಧಾನಗೊಂಡಿರುವ ಪಂಚನಗೌಡ ದ್ಯಾಮನಗೌಡರ ಅವರು ಜೆಡಿಎಸ್ ಅಭ್ಯರ್ಥಿ ಸೌರಭ ಚೋಪ್ರಾಗೆ ಬೆಂಬಲ ಘೋಷಣೆ ಮಾಡಿದ್ದಾರೆ. 


ಕೆಲವು ನಾಯಕರು ಪೂರ್ವ ಯೋಜಿತವಾಗಿ ಟಿಕೆಟ್ ತಪ್ಪಿಸಿದ್ದಾರೆ. ಟಿಕೆಟ್ ಕೊಡಲಿಲ್ಲ ಎಂಬುದಕ್ಕಿಂತ ನಡೆಸಿಕೊಂಡ ರೀತಿಯಿಂದ ನೋವಾಗಿದೆ ಎಂದು ಅವರ ಮುನವಳ್ಳಿ ಗೃಹ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅವರು ಹೇಳಿದರು. 


ಟಿಕೆಟ್‌ಗಾಗಿ ಯಾವುದೇ ಲಾಬಿ ಮಾಡಲಿಲ್ಲ. ಕಳೆದ 30 ವರ್ಷಗಳಲ್ಲಿ ಜನಪರ ನ್ಯಾಯಯುತವಾದ ರಾಜಕೀಯ ಮಾಡಿದ್ದೇನೆ. ನಾನು ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೇನೆ ಎಂಬುದನ್ನು ಸ್ಪಷ್ಟ ಪಡಿಸಬೇಕು.  ರಾಜಕೀಯದಲ್ಲಿ ಚುನಾವಣಾ ಪ್ರಚಾರವನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ. ರಾಜಕೀಯ ಚಟುವಟಿಕೆಗಳಲ್ಲಿ ಮುಂದುವರಿಯುತ್ತೆ ನಮ್ಮ ಮೇಲೆ ವಿಶ್ವಾಸ ಇಲ್ಲದ ಮೇಲೆ ಇನ್ನು ಕಾಂಗ್ರೆಸ್ ಪಕ್ಷ ನಮಗೆ ಅಗತ್ಯವಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಇಷ್ಟು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ, ಜನಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಒಂದು ಮಾತು ಕೇಳದೆ ಅಭ್ಯರ್ಥಿ ಬದಲಾವಣೆ ಮಾಡಿರುವುದು ನೋವು ತಂದಿದೆ ಎಂದು ಹೇಳಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸೌರಭ ಚೋಪ್ರಾ ನಮ್ಮ ತಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 25 ವರ್ಷ ಸೇವೆ ಮಾಡಿದ್ದೇವೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸವದತ್ತಿ ಮತಕ್ಷೇತ್ರದಿಂದ ಲೀಡ್ ನೀಡಿದರೂ ಪಕ್ಷ ನಮ್ಮನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 


ಮಹಾದೇವ ಕಿಚಡಿ, ಚಂದ್ರಶೇಖರ ಮೊರಬದ, ಗಂಗಯ್ಯ ಅಮೋಘಿಮಠ, ಕೆ. ಕೆ. ಪೂಣೆದ, ವಾಶೀಮ ಮುಲ್ಲಾ , ಅಮೀರ್ ಗೋರಿನಾಯ್ಕ, ಯಲ್ಲಪ್ಪ ನೆಲವಡಿ,  ಸಂತೋಷ ಹಾದಿಮನಿ, ಮಹಾದೇವ ಯಂಡ್ರಾವಿ ಸೇರಿದಂತೆ ಚೋಪ್ರಾ ಹಾಗೂ ದ್ಯಾಮನಗೌಡರ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ