ಪಾಮ್ ಎಣ್ಣೆ ತುಂಬಿದ ಲಾರಿ ಪಲ್ಟಿ: ಚಾಲಕ- ಕ್ಲೀನರ್ ಪಾರು
Lorry loaded with palm oil overturns: Driver and cleaner escape
ಪಾಮ್ ಎಣ್ಣೆ ತುಂಬಿದ ಲಾರಿ ಪಲ್ಟಿ: ಚಾಲಕ- ಕ್ಲೀನರ್ ಪಾರು
ಕಾರವಾರ 12 : ಅಂಕೋಲಾ ತಾಲೂಕಿನ ಹರವಾಡ ಗ್ರಾಮದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಪಾಮ್ ಆಯಿಲ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಪರಿಣಾಮ , ಸಾವಿರಾರು ಲೀಟರ್ ಪಾಮ್ ಆಯಿಲ್ ಪಾಕೆಟ್ಸ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು . ಅಪಘಾತ ಪ್ರದೇಶದಲ್ಲಿ ಕ್ಷಣಕಾಲ ಭಯ ಸೃಷ್ಟಿಯಾಯಿತು. ಪ್ರಿಯಾ ಆಯಿಲ್ ಕಂಪನಿಗೆ ಸೇರಿದ ಒಊ- 51, ಅ -4448 ನೋಂದಣಿ ಸಂಖ್ಯೆಯನ್ನು ಹೊಂದಿರುವ ಸರಕು ಲಾರಿ ಹುಬ್ಬಳ್ಳಿಯಿಂದ ಗೋವಾ ಕಡೆಗೆ ಪ್ರಯಾಣಿಸುತ್ತಿತ್ತು. ಶನಿವಾರ ರಾತ್ರಿ 11:30 ರ ಸುಮಾರಿಗೆ ಹರವಾಡ ಬಳಿ, ಏಕಮುಖ ರಸ್ತೆಯ ಬದಿಗೆ ತಿರುಗಿ ಪಲ್ಟಿಯಾಗಿದೆ.ಅಪಘಾತದ ಪರಿಣಾಮವಾಗಿ ಲಾರಿಯಲ್ಲಿದ್ದ ಅಡುಗೆ ಎಣ್ಣೆ (ಪಾಮ್ ಆಯಿಲ್ ) ಬಾಕ್ಸ ಒಡೆದು, ರಸ್ತೆಗೆ ಎಣ್ಣೆ ಬಾಕ್ಸ ಬಿದ್ದು, ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ಅಡ್ಡಿಯಾಯಿತು. ಸ್ಥಳದಲ್ಲಿದ್ದ ಕೆಲವರು ಪಲ್ಟಿಯಾದ ಲಾರಿಯಿಂದ ವಸ್ತುಗಳನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪವೂ ಇದೆ. ಘಟನೆಯ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ಗಾಯಗಳಾಗಿಲ್ಲವಾದರೂ, ಅವರು ಪವಾಡಸದೃಶವಾಗಿ ಪಾರಾಗಿದ್ದಾರೆ. ಸ್ಥಳೀಯರ ಪ್ರಕಾರ, ಅಪಘಾತಕ್ಕೆ ಪ್ರಾಥಮಿಕ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎನ್ನಲಾಗಿದೆ . ತನಿಖೆ ನಡೆಯುತ್ತಿದ್ದು , ಲಾರಿ ಸಿಬ್ಬಂದಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ...
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 