ಬ್ಯಾಡ್ಗಿ

ಲಾರಿಯೊಂದು ನಿಯಂತ್ರಣ ತಪ್ಪಿ ವಿದ್ಯುತ್ ಲೈಟಿಂಗ್ ಕಂಬಕ್ಕೆ ಡಿಕ್ಕಿ

ಲಾರಿಯೊಂದು  ನಿಯಂತ್ರಣ ತಪ್ಪಿ ವಿದ್ಯುತ್ ಲೈಟಿಂಗ್ ಕಂಬಕ್ಕೆ ಡಿಕ್ಕಿ

ಬ್ಯಾಡಗಿ 05: ಪಟ್ಟಣದ ರೇಣುಕಾ ಬಾರ್ ಅಂಗಡಿಯ ತಿರುವಿನಲ್ಲಿ ವೇಗವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಲೈಟಿಂಗ್ ಕಂಬಕ್ಕೆ ಡಿಕ್ಕಿ ಹೊಡೆದು, ಪಾಂಡುರಂಗ ಟಾಕೀಸ್ ಎದುರಿನಲ್ಲಿ ಇರುವ ಅಂಗಡಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದಿ. 05ರಂದು ಬೆಳಿಗ್ಗೆ 6.30ರ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ ಅಪಘಾತ ನಡೆದ ಸಂದರ್ಭದಲ್ಲಿ ಯಾವುದೇ ಸಾವುನೋವುಗಳು ಜರುಗಿಲ್ಲ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 


ಸುದ್ದಿ ಓದಿ